ಕರ್ನಾಟಕ

karnataka

By

Published : Jun 16, 2020, 1:58 PM IST

ETV Bharat / state

ಸಚಿವ ಎಸ್​ ಟಿ ಸೋಮಶೇಖರ್​ ಕೆಲಸದಿಂದ ನನಗೆ ಮುಜುಗರವಾಗಿದೆ: ಹೀಗೆ ಅಂದಿದ್ದೇಕೆ ಆನಂದ್​ ಸಿಂಗ್​?

ಚಾಮುಂಡಿ ಬೆಟ್ಟದಲ್ಲಿ ಮುಂದಿನ ವರ್ಷ ಒಂದು ಲಕ್ಷ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅರಣ್ಯ ಸಚಿವ ಆನಂದ್ ಸಿಂಗ್ ತಿಳಿಸಿದರು. ಈ ವೇಳೆ ತಮ್ಮ ಇಲಾಖೆಗೆ ಸಂಬಂಧಿಸಿದ ಮೃಗಾಲಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ 3.50 ಕೋಟಿ ಹಣವನ್ನು ನೀಡಿರುವುದು ಅರಣ್ಯ ಇಲಾಖೆ ಸಚಿವನಾಗಿ ನನಗೇ ಮುಜುಗರ ಉಂಟುಮಾಡಿದೆ ಎಂದು ಆನಂದ್​ ಸಿಂಗ್​ ತಿಳಿಸಿದ್ದಾರೆ.

forest Minister Anand singh visits mysore
ಸನ್ಮಾನ ಕಾರ್ಯಕ್ರಮ

ಮೈಸೂರು: ನಮ್ಮ ಇಲಾಖೆಗೆ ಸಂಬಂಧಿಸಿದ ಮೃಗಾಲಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ 3.50 ಕೋಟಿ ಹಣವನ್ನು ನೀಡಿರುವುದು ಅರಣ್ಯ ಇಲಾಖೆ ಸಚಿವನಾಗಿ ಮಾಡದ ಕೆಲಸವನ್ನು ಅವರು ಮಾಡಿದ್ದಾರೆ. ಇದು ನನಗೆ ಮುಜುಗರ ಉಂಟುಮಾಡಿದೆ ಎಂದು ಆನಂದ್​ ಸಿಂಗ್​ ತಿಳಿಸಿದ್ದಾರೆ.

ಅರಣ್ಯ ಸಚಿವ ಆನಂದ್ ಸಿಂಗ್
ಇಂದು ಚಾಮುಂಡಿ ಬೆಟ್ಟದಲ್ಲಿ ಲಕ್ಷ ಸಸಿ ನೆಡುವ ಕಾರ್ಯಕ್ರಮದ ಅಧಿಕಾರಿಗಳ ಸಭೆಯ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಮ್ಮ ಅರಣ್ಯ ಇಲಾಖೆಗೆ ಸಂಬಂಧಿಸಿದ ಮೃಗಾಲಯಕ್ಕೆ ಮೈಸೂರು ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಸ್ವತಃ ಆಸಕ್ತಿಯಿಂದ ವಾಟ್ಸಪ್ ಗ್ರೂಪ್‌ ನ ಮೂಲಕ 3.50 ಕೋಟಿ ಹಣ ಸಂಗ್ರಹಿಸಿ ದೇಣಿಗೆ ನೀಡಿದ್ದಾರೆ. ಇಲಾಖೆಯ ಸಚಿವನಾಗಿ ನಾನು ಮಾಡಬೇಕಿದ್ದ ಕೆಲಸವನ್ನು ಅವರೇ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೇ ಸಚಿವರ ಕಾರ್ಯಕ್ಕೆ ಮೆಚ್ಚಿ ಬೆಳ್ಳಿ ಗದೆ ನೀಡಿ ಸನ್ಮಾನಿಸಿದರು.

ನಂತರ ಮಾತನಾಡಿದ ಅವರು, ಚಾಮುಂಡಿ ಬೆಟ್ಟದ 613 ಹೆಕ್ಟೇರ್ ನಲ್ಲಿರುವ ನೀಲಗಿರಿ ಮರಗಳಲ್ಲಿ 310 ಹೆಕ್ಟೇರ್ ನಷ್ಟು ಮರಗಳನ್ನು ತೆಗೆದು ಇನ್ನೊಂದು ವರ್ಷದಲ್ಲಿ ಒಂದು ಲಕ್ಷ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಬಗ್ಗೆ ಅರಣ್ಯಾಧಿಕಾರಿಗಳು ಹಾಗೂ ಸ್ಥಳೀಯ ಶಾಸಕರು ಸಭೆ ನಡೆಸಿ ನರೇಗಾ ಸಹಕಾರದಿಂದ ಈ ಕೆಲಸ ನಡೆಯಲಿದೆ ಎಂದು ವಿವರಿಸಿದರು.

For All Latest Updates

ABOUT THE AUTHOR

...view details