ಮೈಸೂರು :ಪರಿಸರ ಸಂರಕ್ಷಿಸಬೇಕಾದ ಅರಣ್ಯ ಇಲಾಖೆಯೇ ಅದರ ವಿನಾಶಕ್ಕೆ ಮುಂದಾಗಿದೆ. ಮರಗಳನ್ನು ಕಡಿಯಲು ಟೆಂಡರ್ ಕರೆದಿರುವ ಇಲಾಖೆ ಅಧಿಕಾರಿಗಳು, ಹೆಚ್ಚುಬೆಲೆಬಾಳುವ ಮರಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿದ್ದಾರೆ ಎಂದು ಹಾಡಿ ಅರಣ್ಯ ಹಕ್ಕುಗಳ ಸಮಿತಿ ಆರೋಪಿಸಿದೆ.
ಹೆಚ್.ಡಿ.ಕೋಟೆ ತಾಲೂಕಿನ ಕೆ.ಎಡೆತೊರೆ ಗ್ರಾಮ ಪಂಚಾಯತ್‌ನ ಪ್ರಭಾನಗರ ಹಾಡಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿದ್ದ ಸಿಲ್ವರ್, ನೀಲಗಿರಿ, ನೇರಳೆ, ಬನ್ನಿ ಮರಗಳನ್ನು ಮಾರಾಟ ಮಾಡಲು ಟೆಂಡರ್ ಕರೆದಿತ್ತು.