ಕರ್ನಾಟಕ

karnataka

ETV Bharat / state

ಆನ್​ಲೈನ್ ಯೋಗ ತರಬೇತಿ ಕೇಂದ್ರವಾದ ಮೈಸೂರು; ವಿದೇಶಿಯರಿಗೂ ಅಚ್ಚುಮೆಚ್ಚು - ಆನ್​ಲೈನ್​ ಯೋಗ ಕ್ಲಾಸ್

ಕೋವಿಡ್ ಪರಿಣಾಮ ಯೋಗ ತರಬೇತಿಯ ಮೇಲೂ ಬೀರಿದ್ದು, ಮೈಸೂರಿನ ಹಲವು ಯೋಗ ಕೇಂದ್ರಗಳು ಬಾಗಿಲು ಮುಚ್ಚಿವೆ. ಕೆಲವೊಂದು ಯೋಗ ಕೇಂದ್ರಗಳಲ್ಲಿ ವಿದೇಶಿಯರಿಗೆ ಆನ್​ಲೈನ್​ ಮೂಲಕವೇ ತರಬೇತಿ ಮುಂದುವರೆಸಲಾಗಿದೆ.

Mysuru online Yoga
ಆನ್​ಲೈನ್​ ಮೂಲಕ ಯೋಗ ಹೇಳಿಕೊಡುವ ಮೈಸೂರಿನ ಯೋಗ ಕೇಂದ್ರಗಳು

By

Published : Jun 21, 2021, 1:34 PM IST

ಮೈಸೂರು : ಕೋವಿಡ್ ಕಾರಣ ಕಳೆದ ಒಂದೂವರೆ ವರ್ಷದಿಂದ ಸಾಂಸ್ಕೃತಿಕ ನಗರಿಯಲ್ಲಿ ಆನ್​ಲೈನ್ ಮೂಲಕ ವಿದೇಶಿಯರಿಗೆ ಯೋಗ ಹೇಳಿಕೊಡಲಾಗ್ತಿದೆ. ಮೈಸೂರಿನಲ್ಲಿ ಸುಮಾರು 150 ಕ್ಕೂ ಅಧಿಕ ಯೋಗ ಕೇಂದ್ರಗಳಿವೆ. ಪ್ರತಿ ವರ್ಷ 40 ರಿಂದ 50 ಸಾವಿರ ಜನರು ಯೋಗ ಕಲಿಯಲು ನಗರಕ್ಕೆ ಬರುತ್ತಾರೆ‌.

ಕೋವಿಡ್ ಆವರಿಸಲು ಶುರುವಾದ ಬಳಿಕ ಯಾರೂ ನೇರವಾಗಿ ಯೋಗ ಕಲಿಯಲು ಬರುತ್ತಿಲ್ಲ. ಹಾಗಾಗಿ, ಆನ್​ಲೈನ್​ ಮೂಲಕ ಯೋಗ ಕಲಿಸಲಾಗುತ್ತಿದೆ. ಕೋವಿಡ್​ನಿಂದ ಬಾಡಿಗೆ ಕಟ್ಟಲು ಸಾಧ್ಯವಾಗದೆ ಹಲವಾರು ಯೋಗ ಕೇಂದ್ರಗಳು ಬಾಗಿಲು ಮುಚ್ಚಿವೆ ಎಂದು ಎಂದು ಯೋಗ ಶಿಕ್ಷಕ ಸುರೇಶ್ ಹೇಳಿದ್ದಾರೆ.

ಆನ್​ಲೈನ್​ ಮೂಲಕ ಮಾತನಾಡಿದ ವಿದೇಶಿ ಯೋಗ ವಿದ್ಯಾರ್ಥಿಗಳು

ಅಮೆರಿಕ , ಜಪಾನ್, ಜರ್ಮನಿ ಸೇರಿದಂತೆ ಹಲವು ದೇಶಗಳ ಜನರು ಆನ್​ಲೈನ್​ ಮೂಲಕ ಯೋಗ ಕಲಿಯುತ್ತಿದ್ದಾರೆ. ಮನೆಯಿಂದಲೇ ಯೋಗ ಶಿಕ್ಷಕರು ತರಬೇತಿ ನೀಡುತ್ತಿದ್ದಾರೆ. ವಿಶ್ವ ಯೋಗದಿನವಾದ ಇಂದು ಯೋಗ ತರಬೇತಿ ಪಡೆಯುತ್ತಿರುವ ವಿದೇಶಿಯರು ಯೋಗದ ಬಗ್ಗೆ ಮಾತನಾಡಿದ್ದಾರೆ.

ಓದಿ : ದೈಹಿಕ ಶಿಕ್ಷಕಿ ನೀಡಿದ ಪ್ರೋತ್ಸಾಹದ ಫಲ: ಉತ್ತಮ ಯೋಗಪಟುವಾಗಿ ರೂಪುಗೊಂಡ ಯುವತಿ

ABOUT THE AUTHOR

...view details