ಮೈಸೂರು:ನಾಡಹಬ್ಬ ದಸರಾ ಸಿದ್ಧತೆಯನ್ನು ವಹಿಸಿಕೊಂಡಿರುವ ಸಚಿವ ವಿ.ಸೋಮಣ್ಣ ಬೆಳಗ್ಗೆಯಿಂದಲೇ ನಗರದ ಹಲವಾರು ಸ್ಥಳಗಳಿಗೆ ಭೇಟಿ ನೀಡಿ ಅಧಿಕಾರಗಳ ಜತೆ ಸಭೆ ನಡೆಸಿದರು.
ನಾಡ ಹಬ್ಬ ದಸರಾ ಸಿದ್ಧತೆ ಪರಿಶೀಲಿಸಿದ ಉಸ್ತುವಾರಿ ಸಚಿವ ವಿ.ಸೋಮಣ್ಣ.. - ಸಚಿವ ವಿ.ಸೋಮಣ್ಣ
ಸಚಿವ ವಿ.ಸೋಮಣ್ಣ ಮೈಸೂರು ದಸರಾ ಅಂಗವಾಗಿ ನಗರದ ಹಲವಾರು ಸ್ಥಳಗಳಿಗೆ ಭೇಟಿ ನೀಡಿ, ಅಧಿಕಾರಿಗಳ ಜತೆ ಸಭೆ ನಡೆಸಿದರು. ರಸ್ತೆ ದುರಸ್ತಿ, ಸ್ವಚ್ಛತೆ ಬಗ್ಗೆ ಕೂಡಲೇ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ದಸರಾ ಉಸ್ತುವಾರಿ ವಹಿಸಿಕೊಂಡಿರುವ ಸಚಿವ ವಿ.ಸೋಮಣ್ಣ ಶ್ರೀಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಉಳಿದ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.ಮಾಜಿ ಸಚಿವ ಹಾಗೂ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ ಟಿ ದೇವೇಗೌಡ, ಸಂಸದ ಪ್ರತಾಪ್ ಸಿಂಹ ಸಾಥ್ ನೀಡಿದರು.
ಸಬರ್ ಬಸ್ ನಿಲ್ದಾಣಕ್ಕೆ ಆಗಮಿಸಿದ ಅವರು ನಿಲ್ದಾಣದ ಮುಂಭಾಗದ ರಸ್ತೆಗಳನ್ನು ಪರಿಶೀಲಿಸಿದರು. ರಸ್ತೆಗಳ ದುರಸ್ತಿಯಾಗಬೇಕು. ಇಲ್ಲಿ ದಸರಾ ಸಂದರ್ಭದಲ್ಲಿ ಲಕ್ಷಾಂತರ ಜನ ಆಗಮಿಸುತ್ತಾರೆ. ಆದ್ದರಿಂದ ಶೀಘ್ರವೇ ಕಾಮಗಾರಿ ನಡೆಸಬೇಕಾಗಿದೆ. ನಿಲ್ದಾಣದ ಆಸನಗಳನ್ನು ಸರಿಪಡಿಸಬೇಕೆಂದು ವ್ಯವಸ್ಥಾಪಕರಿಗೆ ಸೂಚನೆ ನೀಡಿದರು.