ಕರ್ನಾಟಕ

karnataka

ETV Bharat / state

ಚಾಮುಂಡಿ ಬೆಟ್ಟದಲ್ಲಿ ದೇವಾಲಯ ಬಂದ್ ಆದರೂ ದಾಸೋಹ ನಿಂತಿಲ್ಲ

ಲಾಕ್​​ಡೌನ್​​ನಿಂದ ನಾಡ ಅಧಿದೇವತೆ ಚಾಮುಂಡಿ ದೇವಾಲಯ ಬಂದ್​ ಮಾಡಿದ್ದರೂ ಕೂಡ, ದೇವಿಯ ಹೆಸರಿನಲ್ಲಿ ನಿರಾಶ್ರಿತರಿಗೆ ಅನ್ನ ಸಂತರ್ಪಣೆ ಮುಂದುವರಿಸಿದೆ.

food supply form chamundi temple
ನಿರಾಶ್ರಿತರಿಗೆ ಅನ್ನದಾಸೋಹ

By

Published : May 5, 2020, 4:50 PM IST

ಮೈಸೂರು: ಕೊರೊನಾ ಲಾಕ್​​​ಡೌನ್ ಹಿನ್ನೆಲೆ ಚಾಮುಂಡಿ ತಾಯಿಯ ದರ್ಶನ ಭಾಗ್ಯವಿಲ್ಲ. ಆದರೂ ತಾಯಿಯ ಹೆಸರಲ್ಲಿ ಅನ್ನ ದಾಸೋಹ ಮಾತ್ರ ಇಂದಿಗೂ ನಡೆಯುತ್ತಿದೆ.

ನಿರಾಶ್ರಿತರಿಗೆ ಅನ್ನದಾಸೋಹ
ನಾಡ ಅಧಿದೇವತೆ ಚಾಮುಂಡಿ ತಾಯಿಯ ದರ್ಶನಕ್ಕೆ ಪ್ರತಿ ವರ್ಷ ಸುಮಾರು 25 ಲಕ್ಷಕ್ಕೂ ಹೆಚ್ಚು ವಿದೇಶಿ, ದೇಶಿ, ಹೊರರಾಜ್ಯ ಹಾಗೂ ನಮ್ಮ ರಾಜ್ಯಗಳಿಂದ ಭಕ್ತರು ಆಗಮಿಸುತ್ತಾರೆ. ಆದರೆ, ಲಾಕ್ ಡೌನ್ ಹಿನ್ನೆಲೆ ಚಾಮುಂಡಿ ಬೆಟ್ಟಕ್ಕೆ ಭಕ್ತರಿಗೆ ಪ್ರವೇಶ ನಿರ್ಬಂಧಿಸಿದ್ದು, ದೇವಾಲಯವನ್ನು ಬಂದ್‌ ಮಾಡಲಾಗಿದೆ. ಪ್ರತಿದಿನ ಚಾಮುಂಡಿ ಬೆಟ್ಟದಲ್ಲಿ ನಡೆಯುತ್ತಿದ್ದ ದಾಸೋಹವೂ ಸಹ ಬಂದ್ ಆಗಿದೆ.

ಆದರೆ, ದೇವಸ್ಥಾನದ ವತಿಯಿಂದ ನಡೆಯುತ್ತಿದ್ದ ದಾಸೋಹವನ್ನು ಈಗ ದೇವಸ್ಥಾನದ ಕೆಳಗೆ ಇರುವ ಪೂರ್ಣಯ್ಯ ಛತ್ರದಲ್ಲಿ ನಿರಾಶ್ರಿತರಿಗೆ ತಿಂಡಿ, ಊಟ ಸೇರಿದಂತೆ ಕಳೆದ 43 ದಿನಗಳಿಂದ ಪ್ರತಿದಿನ 2,000 ಜನರಿಗೆ ಊಟ ತಿಂಡಿ ವ್ಯವಸ್ಥೆಯನ್ನು ಜಿಲ್ಲಾಡಳಿತದ ಮನವಿಯ ಮೇರೆಗೆ ಕೊಡುತ್ತಾ ಬಂದಿದೆ. ಲಾಕ್​ಡೌನ್​ ಆದಾಗಿಂದ ಇಲ್ಲಿವರೆಗೆ 65ಸಾವಿರಕ್ಕೂ ಹೆಚ್ಚಿನ ಜನರಿಗೆ ಊಟ ತಿಂಡಿ ನೀಡಿದ್ದು,ಆ ಮೂಲಕ ಚಾಮುಂಡಿ ಬೆಟ್ಟದಲ್ಲಿ ನಡೆಯುತ್ತಿದ್ದ ದಾಸೋಹ ಇಲ್ಲಿಯೂ ಮುಂದುವರೆದಿದೆ ಎನ್ನುತ್ತಾರೆ ಮುಜರಾಯಿ ಇಲಾಖೆಯ ತಹಶೀಲ್ದಾರ್ ಯತಿರಾಜ್.

ABOUT THE AUTHOR

...view details