ಮೈಸೂರು: ಪ್ರವಾಹಕ್ಕೆ ತುತ್ತಾದ ಹಾಸನ ಜಿಲ್ಲೆಯ ಪ್ರದೇಶಗಳಿಗೆ ಸಿಎಫ್ಟಿಆರ್ಐನಿಂದ ರೆಡಿ ಟು ಈಟ್ ಆಹಾರದ ಪ್ಯಾಕೇಟ್ಗಳನ್ನು ಪರಿಹಾರ ಕೇಂದ್ರಗಳಿಗೆ ಕಳುಹಿಸಲಾಗಿದೆ.
ಪ್ರವಾಹಪೀಡಿತ ಪ್ರದೇಶಗಳಿಗೆ ಮೈಸೂರಿನ ಸಿಎಫ್ಟಿಆರ್ಐನಿಂದ ಆಹಾರ ಪೂರೈಕೆ - For homeless people in the Hemavathi River area of Hassan district
ತೀವ್ರ ಪ್ರವಾಹಕ್ಕೆ ತುತ್ತಾಗಿರುವ ಹಾಸನ ಜಿಲ್ಲೆಯ ಹೇಮಾವತಿ ನದಿ ಪ್ರದೇಶದ ನಿರಾಶ್ರಿತ ಜನರಿಗೆ ರೆಡಿ ಟು ಈಟ್ ಆಹಾರ ಪದಾರ್ಥಗಳನ್ನು ಕಳುಹಿಸುವಂತೆ ಹಾಸನ ಜಿಲ್ಲಾಧಿಕಾರಿಗಳ ಮನವಿಯ ಅನ್ವಯ ಹಾಸನ ಜಿಲ್ಲೆಯಲ್ಲಿ ಪ್ರವಾಹಕ್ಕೆ ತುತ್ತಾದ ಸ್ಥಳಗಳಿಗೆ ಮೈಸೂರಿನ ಸಿಎಫ್ಟಿಆರ್ಐ ತಂಡ ಊಟ ಕಳುಹಿಸಿದೆ.
![ಪ್ರವಾಹಪೀಡಿತ ಪ್ರದೇಶಗಳಿಗೆ ಮೈಸೂರಿನ ಸಿಎಫ್ಟಿಆರ್ಐನಿಂದ ಆಹಾರ ಪೂರೈಕೆ](https://etvbharatimages.akamaized.net/etvbharat/prod-images/768-512-4097814-thumbnail-3x2-hfj.jpg)
ತೀವ್ರ ಪ್ರವಾಹಕ್ಕೆ ತುತ್ತಾಗಿರುವ ಹಾಸನ ಜಿಲ್ಲೆಯ ಹೇಮಾವತಿ ನದಿ ಪ್ರದೇಶದ ನಿರಾಶ್ರಿತ ಜನರಿಗೆ ರೆಡಿ ಟು ಈಟ್ ಆಹಾರ ಪದಾರ್ಥಗಳನ್ನು ಕಳುಹಿಸುವಂತೆ ಹಾಸನ ಜಿಲ್ಲಾಧಿಕಾರಿಗಳ ಮನವಿ ಅನ್ವಯ ಹಾಸನ ಜಿಲ್ಲೆಯಲ್ಲಿ ಪ್ರವಾಹಕ್ಕೆ ತುತ್ತಾದ ಸ್ಥಳಗಳಿಗೆ ಮೈಸೂರಿನ ಸಿಎಫ್ಟಿಆರ್ಐ ಚಪಾತಿ, ಟೊಮ್ಯಾಟೋ ಗೊಜ್ಜು ಮತ್ತು ನೀರಿನ ಪ್ಯಾಕೇಟ್ಗಳನ್ನು ಕಳುಹಿಸಲಾಗಿದ್ದು, ಇದನ್ನು ನೇರವಾಗಿ ಸೇವಿಸಬಹುದು. ಜೊತೆಗೆ 6 ತಿಂಗಳುಗಳ ಕಾಲ ಕೆಡದಂತೆ ಇಡಬಹುದು ಎಂದು ಹಿರಿಯ ವಿಜ್ಞಾನಿ ವಿಜಯಾನಂದ್ ತಿಳಿಸಿದ್ದಾರೆ.
ಜೊತೆಗೆ ಕರ್ನಾಟಕದಲ್ಲಿ ಪ್ರವಾಹಕ್ಕೆ ತುತ್ತಾದ ಇತರ ಜಿಲ್ಲೆಗಳಿಂದಲೂ ಆಹಾರ ಪದಾರ್ಥಗಳು ಬೇಕು ಎಂದು ಮೈಸೂರು ಜಿಲ್ಲಾಧಿಕಾರಿಗಳಿಗೆ ಕೋರಿಕೆ ಬಂದರೆ ಅದನ್ನು ಪೂರೈಸಲಾಗುವುದು ಎಂದು ತಿಳಿಸಿದರು.