ಮೈಸೂರು: ಜಿಲ್ಲೆಯಲ್ಲಿ ಆಯುಧ ಪೂಜೆ ಸಡಗರ ಜೋರಾಗಿರುವುದರಿಂದ ಹೂ-ಹಣ್ಣು, ಬೂದುಗುಂಬಳ, ಬಾಳೆ ಕಂದುಗಳ ಬೆಲೆ ಗಗನಕ್ಕೇರಿದೆ. ಆದರೆ ಗ್ರಾಹಕರು ಮಾತ್ರ ದರ ಏರಿಕೆಯ ಕುರಿತು ಚಿಂತಿಸದೆ ಖರೀದಿ ಭರಾಟೆಯಲ್ಲಿ ಮುಳುಗಿದ್ದಾರೆ.
ದಸರಾ: ಬೆಲೆ ಏರಿಕೆ ನಡುವೆಯೂ ಖರೀದಿಗೆ ಮುಗಿಬಿದ್ದ ಜನ! - Flower price increase in Mysore
ಮೈಸೂರು ಜಿಲ್ಲೆಯಲ್ಲಿ ಆಯುಧ ಪೂಜೆಯ ಸಂಭ್ರಮ ಜೋರಾಗಿರುವ ಹಿನ್ನೆಲೆ ಚೆಂಡು ಮಲ್ಲಿಗೆ, ಮಲ್ಲಿಗೆ, ಹೂವಿನ ಹಾರ, ಗುಲಾಬಿ, ಬೂದುಗುಂಬಳ ಸೇರಿದಂತೆ ಇತರೆ ಹೂ-ಹಣ್ಣುಗಳ ಬೆಲೆ ಜಾಸ್ತಿಯಾಗಿದೆ.
ಖರೀದಿ ಭರಾಟೆ
ದೇವರಾಜ ಮಾರುಕಟ್ಟೆಯಲ್ಲಿರುವ ಹೂವಿನ ಮಾರುಕಟ್ಟೆಯನ್ನ ಜೆ.ಕೆ. ಮೈದಾನಕ್ಕೆ ಸ್ಥಳಾಂತರ ಮಾಡಿದ್ದು, ಸೇವಂತಿಗೆ, ಚೆಂಡು ಮಲ್ಲಿಗೆ, ಮಲ್ಲಿಗೆ, ಹೂವಿನ ಹಾರ, ಗುಲಾಬಿ, ಬೂದುಗುಂಬಳ ಸೇರಿದಂತೆ ಇತರೆ ಹೂ-ಹಣ್ಣುಗಳ ಬೆಲೆ ಜಾಸ್ತಿಯಾಗಿದೆ.