ಮೈಸೂರು :ಜುಬಿಲಂಟ್ ಕಾರ್ಖಾನೆಯ ಒಬ್ಬ ಸೋಂಕಿತ ವ್ಯಕ್ತಿಯಿಂದ ಮತ್ತೆ ಐವರಿಗೆ ಕೊರೊನಾ ಸೋಂಕು ಹರಡಿರುವುದು ಇಂದು ದೃಢಪಟ್ಟಿದೆ.
ಒಬ್ಬ ವ್ಯಕ್ತಿಯಿಂದ ಮೈಸೂರಿನಲ್ಲಿ ಐವರಿಗೆ ಕೊರೊನಾ ಸೋಂಕು!! - five corona cases noted in mysore
ಕೊರೊನಾ ಸೋಂಕಿತ ಜುಬಿಲಂಟ್ ಕಾರ್ಖಾನೆಯ ಉದ್ಯೋಗಿಯ ಸಂಪರ್ಕಕ್ಕೆ ಬಂದಿದ್ದ 5 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಜುಬಿಲಂಟ್ ಕಾರ್ಖಾನೆಯ ನೌಕರ p-88 ವ್ಯಕ್ತಿಯಿಂದ ಇಂದು ಇವರ ಸಂಬಂಧಿಕರೆನ್ನಲಾದ 5 ಜನಕ್ಕೆ ಕೊರೊನಾ ಸೋಂಕು ಹರಡಿರುವುದು ಪತ್ತೆಯಾಗಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಇಂದು ಹೊಸ 5 ಪ್ರಕರಣ ಪತ್ತೆಯಾಗಿವೆ. ಒಟ್ಟು ಮೈಸೂರಲ್ಲಿ ಈವರೆಗೆ 47 ಕೊರೊನಾ ಸೋಂಕಿತ ಪ್ರಕರಣಗಳು ದಾಖಲಾಗಿವೆ.
ಈ ಪೈಕಿ ಇಬ್ಬರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಉಳಿದ 45 ಮಂದಿ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದಲ್ಲದೆ ಜುಬಿಲಂಟ್ ಕಾರ್ಖಾನೆಯ ನೌಕರರ ಪ್ರಾಥಮಿಕ ಸಂಪರ್ಕ ಹಾಗೂ ನಂತರದ ಸಂಪರ್ಕದ ಹಲವು ವ್ಯಕ್ತಿಗಳು ಈಗಾಗಲೇ ಕ್ವಾರಂಟೈನ್ನಲ್ಲಿದ್ದಾರೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ತಿಳಿಸಿದ್ದಾರೆ.