ಮೈಸೂರು:ಜಿಲ್ಲೆಯ ಐದು ನಗರ ಸ್ಥಳೀಯ ಸಂಸ್ಥೆಗಳು 'ಸ್ವಚ್ಛ ಸರ್ವೇಕ್ಷಣೆ 2020 ಪ್ರಶಸ್ತಿ' ಪಡೆದಿವೆ.
ಕೇಂದ್ರ ವಸತಿ ಮತ್ತು ನಗರ ವ್ಯವಹಾರ ಸಚಿವಾಲಯವು ಸ್ವಚ್ಛ ಭಾರತ್ ಅಭಿಯಾನದಡಿ ರಾಷ್ಟ್ರದ ವಿವಿಧ ನಗರ ಮತ್ತು ಪಟ್ಟಣಗಳ ನಡುವೆ ಆರೋಗ್ಯಕರ ಸ್ಪರ್ಧೆ ನಡೆಸಿ ಅರ್ಹ ನಗರಗಳಿಗೆ ಪ್ರಶಸ್ತಿ ನೀಡುತ್ತಿದೆ.

2019-20 ರಲ್ಲಿ ನಡೆದ ಸ್ವಚ್ಛ ಸರ್ವೇಕ್ಷಣೆ ಸ್ಪರ್ಧೆಯಲ್ಲಿ ಮೈಸೂರು ಜಿಲ್ಲೆಯ ಮೈಸೂರು ಮಹಾನಗರ ಪಾಲಿಕೆ, ಹುಣಸೂರು ನಗರಸಭೆ, ಕೆ.ಆರ್.ನಗರ ಪುರಸಭೆ, ಎಚ್.ಡಿ. ಕೋಟೆ ಮತ್ತು ಪಿರಿಯಾಪಟ್ಟಣದ ಪುರಸಭೆ ಈ ಬಾರಿ ಪ್ರಶಸ್ತಿಗೆ ಪಾತ್ರವಾಗಿವೆ.
ಪ್ರಶಸ್ತಿ ಪ್ರದಾನ ಸಮಾರಂಭ ಆಗಸ್ಟ್ 20ರಂದು ನಡೆಯಲಿದ್ದು, ಪ್ರಧಾನ ಮಂತ್ರಿಗಳು ಪ್ರಶಸ್ತಿ ನೀಡಲಿದ್ದಾರೆ. ಇದರ ಅಂಗವಾಗಿ ಮೈಸೂರಿನ ಪೌರ ಕಾರ್ಮಿಕರೊಂದಿಗೆ ಪ್ರಧಾನಿ ವಿಡಿಯೋ ಸಂವಾದ ನಡೆಸಲಿದ್ದಾರೆ. ಈ ಕಾರ್ಯಕ್ರಮ ವಿಶ್ವವಿಖ್ಯಾತ ಅರಮನೆಯ ಮುಂಭಾಗದಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.