ಮೈಸೂರು: ಅಮೆರಿಕದಲ್ಲಿ ಉನ್ನತ ವ್ಯಾಸಂಗಕ್ಕೆ ತೆರಳಿದ್ದ ಮೈಸೂರಿನ ಯುವಕ ಅಲ್ಲಿ ಅಪರಿಚಿತರ ಗುಂಡಿನ ದಾಳಿಗೆ ಬಲಿಯಾಗಿದ್ದಾನೆ.
ಮೈಸೂರಿನ ಕುವೆಂಪು ನಗರದ ಅಭಿಷೇಕ್ (25) ಗುಂಡಿನ ದಾಳಿಗೆ ಬಲಿಯಾಗಿರುವ ಯುವಕ. ಈತ ಅಮೆರಿಕಾದ ಸ್ಯಾನ್ ಬರ್ನಾಂಡಿಗೊದಲ್ಲಿರುವ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಎಂ.ಎಸ್ ಮಾಡಲು ಕಳೆದ ಒಂದುವರೆ ವರ್ಷದ ಹಿಂದೆ ತೆರಳಿದ್ದ.