ಮೈಸೂರು: ನಂಜನಗೂಡು ತಾಲೂಕಿನ ಕೋಣನೂರು ಮತ್ತು ಚುಂಚನಹಳ್ಳಿ ಕಿರು ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಿಡಿಗೇಡಿಗಳು ಕುರುಚಲು ಅರಣ್ಯ ಪ್ರದೇಶದ ಬೆಟ್ಟಕ್ಕೆ ಬೆಂಕಿ ಇಟ್ಟಿರುವ ಶಂಕೆ ವ್ಯಕ್ತವಾಗ್ತಿದೆ.
ಇಲ್ಲಿನ ಕೃಷ್ಣರಾಜಪುರ ಗ್ರಾಮದ ಬಳಿ ಕಾಣಿಸಿಕೊಂಡ ಬೆಂಕಿ ಅರಣ್ಯ ಪ್ರದೇಶಕ್ಕೂ ಆವರಿಸಿದೆ. ಬೆಟ್ಟದಲ್ಲಿದ್ದ ಮರ, ಗಿಡ, ಸಸಿಗಳು ಭಸ್ಮವಾಗಿವೆ. ಈ ಭಾಗದಲ್ಲಿ ಜಿಂಕೆ, ನವಿಲು, ಚಿರತೆ, ಮೊಲ, ಕಾಡು ಹಂದಿ, ಕಿರುಬ ಹೀಗೆ ಪ್ರಾಣಿ-ಪಕ್ಷಿಗಳು ಹೆಚ್ಚಾಗಿ ಕಂಡುಬರುತ್ತವೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಪ್ರಾಣಿಗಳು ಜೀವ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಿವೆ.