ಮೈಸೂರು:ವರುಣನ ಅಬ್ಬರಕ್ಕೆ ಸಾಂಸ್ಕೃತಿಕ ನಗರಿ ಮೈಸೂರು ತತ್ತರವಾಗಿದ್ದು,ಭಾರಿ ಮಳೆಗೆ ಮನೆ ಮೇಲ್ಚಾವಣಿ ಕುಸಿದು ಮಣ್ಣಿನಡಿ ಸಿಲುಕಿದ ವೃದ್ಧರೊಬ್ಬರನ್ನು ಅಗ್ನಿ ಶಾಮಕದ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ಮನೆ ಮೇಲ್ಚಾವಣಿ ಕುಸಿದು ಮಣ್ಣಿನಡಿ ಸಿಲುಕಿದ ವೃದ್ಧ:ಅಗ್ನಿಶಾಮಕ ದಳದಿಂದ ರಕ್ಷಣೆ - mysore rain report
ಮೈಸೂರಿನಲ್ಲಿ ಭಾರಿ ಮಳೆ ಹಿನ್ನೆಲೆ ಮನೆ ಮೇಲ್ಚಾವಣಿ ಕುಸಿದು ಮಣ್ಣಿನಡಿ ಸಿಲುಕಿದ ವೃದ್ಧರೊಬ್ಬರನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ.
ವೃದ್ಧನ ರಕ್ಷಣೆ
ನಗರದ ಉತ್ತರಾಧಿ ಮಠದ 4ನೇ ಕ್ರಾಸ್‌ನ ನಿವಾಸಿ ರಾಮನಾಥ್ (70) ಅವರನ್ನು ರಕ್ಷಿಸಲಾಗಿದೆ.ಮಳೆಗೆ ಮನೆ ಕುಸಿದು ಮನೆಯೊಳಗೆ ಸಿಲುಕಿದ್ದ ವೃದ್ಧ ಅಸ್ವಸ್ಥಗೊಂಡಿದ್ದರು.ಆ್ಯಂಬುಲೆನ್ಸ್ ಬಾರದ ಹಿನ್ನೆಲೆ ಅಗ್ನಿಶಾಮಕದಳದ ಸಿಬ್ಬಂದಿ ತಮ್ಮ ವಾಹನದಲ್ಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಇದನ್ನೂ ಓದಿ:ದೆವ್ವ ಭಯದಲ್ಲಿ ಆತ್ಮಹತ್ಯೆಗೆ ಶರಣಾದ ಪೊಲೀಸ್ ಕಾನ್ಸ್‌ಟೇಬಲ್: ಕನಸಲ್ಲಿ ಬರ್ತಿತ್ತಂತೆ ಹೆಣ್ಣಿನ ಆತ್ಮ