ಕರ್ನಾಟಕ

karnataka

ETV Bharat / state

KSOUದಿಂದ ಎಫ್​ಡಿಎ, ಎಸ್​ಡಿಎ ಹುದ್ದೆಗಳಿಗೆ ಅರ್ಜಿ ಆಹ್ವಾನ

FDA, SDA Jobs: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ವಿವಿಧ ತಾಂತ್ರಿಕೇತರ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ.

By

Published : Aug 21, 2023, 4:38 PM IST

FDA and SDA Job notification by KSOU mysore
FDA and SDA Job notification by KSOU mysore

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ (ಕೆಎಸ್‌ಒಯು) ಖಾಲಿ ಇರುವ ತಾಂತ್ರಿಕೇತರ ಹುದ್ದೆಗಳ ಭರ್ತಿಗೆ ಅರ್ಜಿ ಅಹ್ವಾನಿಸಲಾಗಿದೆ. ಎಫ್​ಡಿಎ, ಎಸ್​ಡಿಎ ಸೇರಿದಂತೆ ಒಟ್ಟು 32 ಗ್ರೂಪ್​ ಸಿ ಹುದ್ದೆಗಳಿವೆ. ಹೈದರಾಬಾದ್​ ಕರ್ನಾಟಕ ವ್ಯಾಪ್ತಿಯ ಸ್ಥಳೀಯ ಅಭ್ಯರ್ಥಿಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುತ್ತದೆ. ನೇಮಕಾತಿ, ಅರ್ಜಿ ಆಹ್ವಾನ ಸೇರಿದಂತೆ ಇನ್ನಿತರ ಮಾಹಿತಿ ಈ ಕೆಳಗಿನಂತಿದೆ.

ಹುದ್ದೆ ಹುದ್ದೆಗಳ ಸಂಖ್ಯೆ ವಿದ್ಯಾರ್ಹತೆ ವೇತನ
ಎಫ್​ಡಿಎ 4 ಪದವಿ 30,350-58,250 ರೂ
ಡಾಟಾ ಎಂಟ್ರಿ ಆಪರೇಟರ್ 5 ಪಿಯುಸಿ, ಪದವಿ 27,650-52,650 ರೂ
ಎಸ್​ಡಿಎ 8 ಪಿಯುಸಿ, ಪದವಿ 21,400-42,000 ರೂ
ಟೈಪಿಸ್ಟ್​​ ಮತ್ತು ಅಸಿಸ್ಟೆಂಟ್​​ 1 ಎಸ್​ಎಸ್​ಎಲ್​ಸಿ 21,400-42,000 ರೂ
ವಾಹನ ಚಾಲಕರು 1 ಎಸ್​ಎಸ್​ಎಲ್​ಸಿ 21,400-42,000 ರೂ
ಎಲೆಕ್ಟ್ರಿಷಿಯನ್​ 1 ಎಸ್​ಎಸ್​ಎಲ್​ಸಿ, ಡಿಪ್ಲೊಮಾ ಇನ್​ ಎಲೆಕ್ಟ್ರಿಕಲ್​ ಇಂಜಿನಿಯರಿಂಗ್‌​, ಐಟಿಐ 21,400-42,000 ರೂ
ಪ್ಲಂಬರ್ 1 7ನೇ ತರಗತಿ, ಎಸ್​ಎಸ್​ಎಲ್​ಸಿ 21,400-42,000 ರೂ
ಅಟೆಂಡೆಂಟ್​​ 2 ಎಸ್​ಎಸ್​ಎಲ್​ಸಿ 19,950-37,900 ರೂ
ಗ್ಯಾಂಗ್​ಮೆನ್ 1 7ನೇ ತರಗತಿ , ಎಸ್​​ಎಸ್​ಎಲ್​ಸಿ 18,600-32,600 ರೂ
ಸೇವಕ​​ ​​ 5 7ನೇ ತರಗತಿ 17,000-28,950 ರೂ
ಸ್ವೀಪರ್ 2 7ನೇ ತರಗತಿ 17,000-28,950 ರೂ
ಹೆಲ್ಪರ್ 1 7ನೇ ತರಗತಿ 17,000-28,950 ರೂ

ಅನುಭವ: ವಾಹನ ಚಾಲಕರು ಮತ್ತು ಪ್ಲಂಬರ್​ ಹುದ್ದೆಗೆ ಅರ್ಜಿ ಸಲ್ಲಿಸುವವರು ತಮ್ಮ ಕಾರ್ಯಕ್ಷೇತ್ರದಲ್ಲಿ ಕ್ರಮವಾಗಿ 3 ಮತ್ತು 2 ವರ್ಷದ ಹುದ್ದೆ ನಿರ್ವಹಣೆ ಮಾಡಿದ ಅನುಭವ ಹೊಂದಿರಬೇಕು.

ಅಧಿಸೂಚನೆ

ವಯೋಮಿತಿ: ಕನಿಷ್ಟ 18, ಗರಿಷ್ಠ 35 ವರ್ಷ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ 1 ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ.

ಅರ್ಜಿ ಸಲ್ಲಿಕೆ: ನಿಗದಿತ ಅರ್ಜಿ ಸಲ್ಲಿಕೆ ಫಾರ್ಮ್​ ಅನ್ನು ಕೆಳಗೆ ನೀಡಿದ ವಿಳಾಸಕ್ಕೆ ಆಫ್​ಲೈನ್​ ಮೂಲಕ ಭರ್ತಿ ಮಾಡಬೇಕು. ಅರ್ಜಿ ಶುಲ್ಕವನ್ನು ಆನ್​ಲೈನ್​ ಮೂಲಕ ಪಾವತಿಸಿ, ರಶೀದಿಯನ್ನು ಅರ್ಜಿ ಜೊತೆಯೇ ಸಲ್ಲಿಸಬೇಕು. ಪ.ಜಾತಿ, ಪ.ಪಂ ಮತ್ತು ಪ್ರವರ್ಗ 1 ಅಭ್ಯರ್ಥಿಗಳಿಗೆ 500 ರೂ ಅರ್ಜಿ ಶುಲ್ಕ ವಿಧಿಸಲಾಗಿದೆ. ಇತರೆ ಅಭ್ಯರ್ಥಿಗಳಿಗೆ 1,000 ರೂ ಅರ್ಜಿ ಶುಲ್ಕ ನಿಗದಿಸಲಾಗಿದೆ.

ಅರ್ಜಿ ಸಲ್ಲಿಕೆ ವಿಳಾಸ: ಕುಲ ಸಚಿವರು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮುಕ್ತ ಗಂಗೋತ್ರಿ, ಮೈಸೂರು- 570006.

ಆಯ್ಕೆ: ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ.

ಈ ಹುದ್ದೆಗೆ ಅಭ್ಯರ್ಥಿಗಳು ಆಗಸ್ಟ್​ 16ರಿಂದ ಅರ್ಜಿ ಸಲ್ಲಿಸಬಹುದಾಗಿದ್ದು, ಸೆಪ್ಟೆಂಬರ್​ 30 ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ. ಅಧಿಕೃತ ಅಧಿಸೂಚನೆ ಹಾಗೂ ನಿಗದಿತ ಅರ್ಜಿ ಪಡೆಯಲು ಅಭ್ಯರ್ಥಿಗಳು ksoumysuru.ac.in ಜಾಲತಾಣಕ್ಕೆ ಭೇಟಿ ನೀಡಿ.

ಇದನ್ನೂ ಓದಿ:JOB Alert: ಮೆಸ್ಕಾಂನಲ್ಲಿ 200 ಅಪ್ರೆಂಟಿಸ್​ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

ABOUT THE AUTHOR

...view details