ಮೈಸೂರು: ಕೊರೊನಾ ಹಿನ್ನೆಲೆಯಲ್ಲಿ ನೈಟ್ ಕರ್ಫ್ಯೂ ಜಾರಿಯಾದರೆ ಸರ್ಕಾರದ ಆದೇಶಕ್ಕೆ ತಲೆಬಾಗಿ ಕ್ರಿಸ್ಮಸ್ ಹಬ್ಬವನ್ನು ಸಾಂಪ್ರದಾಯಿಕ ಹಾಗೂ ಸರಳವಾಗಿ ಆಚರಣೆ ಮಾಡುತ್ತೇವೆ ಎಂದು ಮೈಸೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಡಾ. ಕೆ.ವಿಲಿಯಂ ಹೇಳಿದರು.
ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಡಿ. 24ರ ರಾತ್ರಿಯಿಂದ ಸಂತ ಫಿಲೋಮಿನಾ ಚರ್ಚ್ನಲ್ಲಿ ಧಾರ್ಮಿಕ ಪೂಜಾ ಕೈಂಕರ್ಯ ಆರಂಭಿಸಲಾಗುವುದು. ಡಿ. 25ರಂದು ಕೂಡ ಪ್ರತಿ ಒಂದು ಗಂಟೆಗೊಮ್ಮೆ ಪೂಜೆ ನಡೆಸಲಾಗುವುದು. ಚರ್ಚ್ ಒಳಗೆ ಒಂದು ಸಾವಿರ ಮಂದಿ ಕುಳಿತುಕೊಳ್ಳುವ ಸಾಮರ್ಥ್ಯವಿದೆ. ಆದರೆ ಈ ಬಾರಿ 250 ಮಂದಿ ಮಾತ್ರ ಪ್ರಾರ್ಥನೆಗೆ ಅವಕಾಶ ಮಾಡಿಕೊಡಲಾಗುವುದು. ಆನ್ಲೈನ್ನಲ್ಲಿ ಪೂಜಾ ಕೈಂಕರ್ಯ ನೇರ ಪ್ರಸಾರ ಮಾಡಲಾಗುವುದು ಎಂದರು.
ಇದನ್ನೂ ಓದಿ:ಬ್ರಿಟನ್‌ನಿಂದ ಮೈಸೂರಿಗೆ 137 ಜನರ ಆಗಮನ.. ಎಲ್ಲರ ಕೋವಿಡ್ ಪರೀಕ್ಷೆಗೆ ಕ್ರಮ