ಕರ್ನಾಟಕ

karnataka

ETV Bharat / state

ತಂದೆ ಸಾವು, ಮನನೊಂದ ಮಗ ಆತ್ಮಹತ್ಯೆಗೆ ಶರಣು.. ಕೌಟುಂಬಿಕ ಕಲಹಕ್ಕೆ ಒಂದೇ ದಿನ ಇಬ್ಬರು ಬಲಿ

ಕೌಟುಂಬಿಕ ಕಲಹದ ಹಿನ್ನೆಲೆ ತಂದೆ ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿದು ಮಗನೂ ಸಾವಿನ ಹಾದಿ ಹಿಡಿದ ಘಟನೆ ಹೆಚ್​ ಡಿ ಕೋಟೆ ತಾಲೂಕಿನl್ಲಿ ನಡೆದಿದೆ.

ಆತ್ಮಹತ್ಯೆ
ಆತ್ಮಹತ್ಯೆ

By

Published : Mar 15, 2023, 3:29 PM IST

Updated : Mar 15, 2023, 3:48 PM IST

ಮೈಸೂರು :ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮನನೊಂದು ತಂದೆ ಆತ್ಮಹತ್ಯೆಗೆ ಶರಣಾಗಿದ್ದು, ಇದರಿಂದ ಮಗನೂ ಸಹ ತಂದೆ ಸಾವಿನ ನೋವನ್ನು ತಡೆಯಲಾಗದೆ ಜಮೀನಿನಲ್ಲಿ ಮೃತಪಟ್ಟಿರುವ ಘಟನೆ ಹೆಚ್ ಡಿ ಕೋಟೆ ತಾಲೂಕಿನ ಎನ್ ಬೇಗೂರು ಬಳಿಯ ಜಕ್ಕಳ್ಳಿ ಕಾಲೋನಿಯಲ್ಲಿ ನಡೆದಿದೆ. ತಂದೆ- ಮಗ ಒಂದೇ ದಿನದಲ್ಲಿ ದುರಂತ ಅಂತ್ಯ ಕಂಡಿರುವುದು ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ.

ಮೃತರನ್ನು ನಾಗೇಗೌಡ (55) ಮಗ ಮಧು (24) ಎಂದು ಗುರುತಿಸಲಾಗಿದೆ. ಕೌಟುಂಬಿಕ ಕಲಹದಿಂದ ಮನನೊಂದಿದ್ದ ನಾಗೇಗೌಡ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೀಗೆ ತಂದೆ ನೇಣಿಗೆ ಶರಣಾದ ಸುದ್ದಿ ತಿಳಿದ ಮಗ ಮಧು (24) ತಡರಾತ್ರಿ ಜಮೀನಿಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಯಾರೂ ದೂರು ನೀಡದ ಹಿನ್ನೆಲೆ ದಾಖಲಾಗದ ಪ್ರಕರಣ:ನಿನ್ನೆ ತಂದೆ ತಡರಾತ್ರಿ ಮಗ ಇಬ್ಬರೂ ಆತ್ಮಹತ್ಯೆಗೆ ಶರಣಾಗಿದ್ದು, ಇಬ್ಬರ ಅಂತ್ಯಕ್ರಿಯೆಯನ್ನ ಕುಟುಂಬಸ್ಥರು ಒಟ್ಟಿಗೆ ನೆರವೇರಿಸಿದ್ದಾರೆ. ಹೆಚ್ ಡಿ ಕೋಟೆ ಬಳಿಯ ಅಂತರಸಂತೆ ಪೊಲೀಸ್​ ಠಾಣೆಯ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಆದರೆ ಈ ಸಂಬಂಧ ಯಾರು ದೂರು ನೀಡದ ಹಿನ್ನೆಲೆ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಮನೆಯಲ್ಲಿ ಯುವಕನ ಅನುಮಾನಾಸ್ಪದ ಸಾವು:ಇನ್ನೊಂದೆಡೆ ಸಂಬಂಧಿಕರೊಬ್ಬರ ಹುಟ್ಟು ಹಬ್ಬದ ಕಾರ್ಯಕ್ರಮಕ್ಕೆ ಹೋಗಿ ಬಂದಿದ್ದ ಯುವಕನೊಬ್ಬ ಮನೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕಟ್ಟೆಮಳಲವಾಡಿ ಗ್ರಾಮದಲ್ಲಿ ನಿನ್ನೆ (ಮಂಗಳವಾರ) ನಡೆದಿದೆ. ಕುಟುಂಬಸ್ಥರು ಮೊದಲು ಯುವಕನದ್ದು ಸಹಜ ಸಾವೆಂದು ತಿಳಿದು ಅಂತ್ಯಕ್ರಿಯೆಗೆ ಮುಂದಾಗಿದ್ದರು. ಈ ವೇಳೆ ಪೋಷಕರು ಯುವಕನ ಮೈ ಮೇಲಿದ್ದ ಗಾಯಗಳನ್ನ ಕಂಡು ಅಂತ್ಯಕ್ರಿಯೆ ನಿಲ್ಲಿಸಿ, ಅನುಮಾನಾಸ್ಪದ ಸಾವೆಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ವಿನಯ್(22) ಅನುಮಾನಾಸ್ಪದವಾಗಿ ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಎರಡು ದಿನಗಳ ಹಿಂದೆ ಚಿಲಕುಂದ ಗ್ರಾಮದಲ್ಲಿ ಸಂಬಂಧಿಕರ ಹುಟ್ಟು ಹಬ್ಬಕ್ಕೆಂದು ತೆರಳಿದ್ದ, ಹೀಗೆ ತೆರಳುವಾಗ ತಾಯಿಯ ಬಳಿ ಒಂದು ಸಾವಿರ ರೂಪಾಯಿ ಪಡೆದು, ಅದೇ ಹಣದಲ್ಲಿ ಸ್ನೇಹಿತರ ಜೊತೆ ಸೇರಿ ಪಾರ್ಟಿ ಮಾಡಿದ್ದನಂತೆ.

ಸಂಬಂಧಿಕರ ಹುಟ್ಟುಹಬ್ಬ ಮುಗಿಸಿಕೊಂಡು ಎರಡು ದಿನಗಳ‌ ನಂತರ ಮನೆಗೆ ಬಂದು ಮಲಗಿದ್ದಾನೆ. ಮಾರನೇ ದಿನ ಬೆಳಗ್ಗೆ‌ ಯುವಕ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಯುವಕನ ಶವ, ಕತ್ತಿಗೆ ಸೀರೆ ಸುತ್ತಿಕೊಂಡ ರೀತಿಯಲ್ಲಿ ಪತ್ತೆಯಾಗಿದ್ದು, ಅದು ಸಹಜ ಸಾವೆಂದು ತಿಳಿದುಕೊಂಡ ಕುಟುಂಬದ ಸದಸ್ಯರು ಅಂತ್ಯಕ್ರಿಯೆಗೆ ಮುಂದಾಗಿದ್ದರು.

ದೇಹದ ಮೇಲೆ ಗಾಯದ ಗುರುತುಗಳು ಪತ್ತೆ: ಯುವಕನ ಅಂತ್ಯಕ್ರಿಯೆಗೆ ಮುಂದಾಗಿದ್ದ ಕುಟುಂಬದ ಸದಸ್ಯರು ಮೃತದೇಹಕ್ಕೆ ಸಾಂಪ್ರದಾಯಿಕವಾಗಿ ಸ್ನಾನ ಮಾಡಿಸುವ ವೇಳೆ ಬೆನ್ನಿನ ಮೇಲೆ ಹಲವು ಗಾಯದ ಗುರುತುಗಳು ಕಂಡುಬಂದಿವೆ. ಜೊತೆಗೆ ಬಲಗಾಲಿನಲ್ಲಿ ಯಾರೋ ಹಲ್ಲಿನಿಂದ ಕಚ್ಚಿದ ಹಾಗೇ ಗುರುತುಗಳು ಕಂಡುಬಂದಿದ್ದು ಅನುಮಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಪೋಷಕರು ಇದೊಂದು ಅನುಮಾನಾಸ್ಪದ ಸಾವೆಂದು, ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ :ಮದುವೆಯಾದ ಮೂರೇ ದಿನಕ್ಕೆ ನವವಿವಾಹಿತೆ ಸಾವು: ಕೊಲೆ ಆರೋಪ

Last Updated : Mar 15, 2023, 3:48 PM IST

ABOUT THE AUTHOR

...view details