ಮೈಸೂರು: ಸ್ನಾನ ಮಾಡುವ ವಿಡಿಯೋ ಮಾಡಿ ಗೃಹಿಣಿಗೆ ಲೈಂಗಿಕ ದೌರ್ಜನ್ಯ ಹಾಗೂ ಹಣಕ್ಕಾಗಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದ ತಂದೆ ಮಗನ ವಿರುದ್ಧ ನಗರದ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಹೆಬ್ಬಳಾ ಬಡಾವಣೆಯ ನಿವಾಸಿ ಪ್ರಮೋದ್ ಹಾಗೂ ಆತನ ತಂದೆ ಗೋವಿಂದರಾಜು ಮನೆಯ ಪಕ್ಕದಲ್ಲಿ ಕುಟುಂಬವೊಂದು ವಾಸಿಸುತ್ತಿದೆ. ಮಹಿಳೆಯ ಗಂಡ ಕೆಲಸಕ್ಕೆ ಹೋದ ಸಂದರ್ಭದಲ್ಲಿ ತಂದೆ - ಮಗ ಗುಪ್ತವಾಗಿ ಆಕೆಯ ಸ್ನಾನದ ವಿಡಿಯೋವನ್ನು ತಮ್ಮ ಮೊಬೈಲ್ನಲ್ಲಿ ಚಿತ್ರಿಕರಿಸಿದ್ದಾರೆ. ಬಳಿಕ ಕಳೆದ ಎರಡು ವರ್ಷಗಳಿಂದ ವಿಡಿಯೋ ತೋರಿಸಿ ಸಂತ್ರಸ್ತೆ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಹಣಕ್ಕಾಗಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದರು.