ಕರ್ನಾಟಕ

karnataka

ETV Bharat / state

ಯುವತಿ ಚುಡಾಯಿಸಿದನೆಂದು ಯುವಕನ ಮೇಲೆ ಮಾರಣಾಂತಿಕ ಹಲ್ಲೆ.. ವಿಡಿಯೋ - ಮೈಸೂರಿನಲ್ಲಿ ಯುವತಿ ಚುಡಾಯಿಸಿದ್ದಕ್ಕೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ

ಪೆಟ್ರೋಲ್ ಬಂಕ್ ಮುಂಭಾಗದಲ್ಲೇ ಇರುವ ಕಟ್ಟಡದಲ್ಲಿ ಮೆಣಸಿನಕಾಯಿ ವ್ಯಾಪಾರಕ್ಕೆ ಆರೋಪಿ ಕಿರಣ್ ಮಳಿಗೆ ಬಾಡಿಗೆ ಕೊಟ್ಟಿದ್ದರು. ಮೆಣಸಿನಕಾಯಿ ತುಂಬಲು ರಾಜು ಆಗಾಗ ಮಳಿಗೆಗೆ ಬರುತ್ತಿದ್ದ..

ಯುವತಿ ಚುಡಾಯಿಸಿದ್ದಕ್ಕೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ
ಯುವತಿ ಚುಡಾಯಿಸಿದ್ದಕ್ಕೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ

By

Published : Jul 16, 2021, 5:25 PM IST

ಮೈಸೂರು: ಯುವತಿಯನ್ನು ಚುಡಾಯಿಸಿದನೆಂದು ಯುವಕನ ಮೇಲೆ ಯುವಕರ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನಲ್ಲಿ ನಡೆದಿದೆ.

ತಾಲೂಕಿನ ಉತ್ತೇನಹಳ್ಳಿಯ ಗ್ರಾಮದ ನಿವಾಸಿ ರಾಜು (25) ಹಲ್ಲೆಗೊಳಗಾದ ಯುವಕ. ಗಂಭೀರವಾಗಿ ಗಾಯಗೊಂಡಿರುವ ಈತನನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವಕನ ಮೇಲೆ ಹಲ್ಲೆ ನಡೆಸಿದ ಕಿರಣ್, ಪುನೀತ್, ಪ್ರಕಾಶ್ ಹಾಗೂ ನವೀನ್‌ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಯುವಕನ ಮೇಲೆ ಮಾರಣಾಂತಿಕ ಹಲ್ಲೆ..

ಉತ್ತೇನಹಳ್ಳಿ ರಾಜು ಮೆಣಸಿನಕಾಯಿ ವ್ಯಾಪಾರಿಯೊಬ್ಬರ ಬಳಿ ಕೂಲಿ ಕೆಲಸ ಮಾಡುತ್ತಿದ್ದ. ಪಂಚವಳ್ಳಿ ಸರ್ಕಲ್ ಬಳಿ ಇರುವ ಪೆಟ್ರೋಲ್ ಬಂಕ್ ಮುಂದೆ ಇರುವ ಮನೆಯೊಂದರ ಯುವತಿಯನ್ನ ಪ್ರೀತಿಸುತ್ತಿದ್ದ ಎನ್ನಲಾಗಿದೆ.

ಪೆಟ್ರೋಲ್ ಬಂಕ್ ಮುಂಭಾಗದಲ್ಲೇ ಇರುವ ಕಟ್ಟಡದಲ್ಲಿ ಮೆಣಸಿನಕಾಯಿ ವ್ಯಾಪಾರಕ್ಕೆ ಆರೋಪಿ ಕಿರಣ್ ಮಳಿಗೆ ಬಾಡಿಗೆ ಕೊಟ್ಟಿದ್ದರು. ಮೆಣಸಿನಕಾಯಿ ತುಂಬಲು ರಾಜು ಆಗಾಗ ಮಳಿಗೆಗೆ ಬರುತ್ತಿದ್ದ. ಈ ವೇಳೆ ಯುವತಿಯನ್ನು ಪ್ರೇಮದ ಬಲೆಗೆ ಬೀಳಿಸಲು ಪ್ರಯತ್ನಿಸಿದ್ದಾನೆ ಎಂದು ಆರೋಪಿಸಿ ಕಿರಣ್ ಇತರರೊಂದಿಗೆ ಸೇರಿಕೊಂಡು ಪೆಟ್ರೋಲ್ ಹಾಕಿಸಲು ಬಂದ ರಾಜು ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದನ್ನೂ ಓದಿ : ಶೀಘ್ರದಲ್ಲೇ ಏಳೆಂಟು ಸಚಿವರು ದೆಹಲಿಗೆ ತೆರಳಲಿದ್ದೇವೆ: ಸಚಿವ ಬಿ.ಸಿ.ಪಾಟೀಲ್

ABOUT THE AUTHOR

...view details