ಕರ್ನಾಟಕ

karnataka

By

Published : Jul 4, 2021, 3:29 PM IST

ETV Bharat / state

ಕೋವಿಡ್‌ನಿಂದ ಮೃತಪಟ್ಟ ರೈತರ 1 ಲಕ್ಷ ಸಾಲ‌ ಮನ್ನಾ‌‌: ಅಪೆಕ್ಸ್ ಬ್ಯಾಂಕ್‌ ಉಪಾಧ್ಯಕ್ಷ

ರಾಜ್ಯದ ಎಲ್ಲಾ ಡಿಸಿಸಿ ಬ್ಯಾಂಕ್‌ಗಳಿಂದ 13 ಸಾವಿರ ಕೋಟಿ ಬೆಳೆ‌ ಸಾಲ‌ ನೀಡಲಾಗಿದೆ‌. ಮಹಾಮಾರಿ ಕೊರೊನಾ ಗ್ರಾಮೀಣ ಭಾಗಕ್ಕೂ ಆವರಿಸಿ ಸಾವು-ನೋವುಗಳಾಗಿವೆ. ಕೊರೊನಾಗೆ ಬಲಿಯಾದ ರೈತ ಕುಟುಂಬಗಳು ಬೀದಿ ಪಾಲಾಗುತ್ತಿವೆ. ಹೀಗಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಅವರು ಹೇಳಿದರು.

harishgowda
ಜಿ.ಟಿ.ಹರೀಶ್ ಗೌಡ ಸುದ್ದಿಗೋಷ್ಟಿ

ಮೈಸೂರು:ಕೋವಿಡ್‌ನಿಂದ ಮೃತಪಟ್ಟ ರೈತರ ಒಂದು ಲಕ್ಷ ಸಾಲ‌ ಮನ್ನಾ‌‌ ಮಾಡಲಾಗುವುದು ಎಂದು ಅಪೆಕ್ಸ್ ಬ್ಯಾಂಕ್‌ ಉಪಾಧ್ಯಕ್ಷ ಜಿ.ಟಿ.ಹರೀಶ್‌ಗೌಡ ಹೇಳಿದ್ದಾರೆ. ಮೈಸೂರು-ಚಾಮರಾಜನಗರ ಸಹಕಾರಿ ಬ್ಯಾಂಕ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಮೃತ ರೈತರ ಸಾಲ‌ ಮನ್ನಾ ಬಗ್ಗೆ ಅಪೆಕ್ಸ್ ಬ್ಯಾಂಕ್‌ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಮುಂದಿನ ಸಭೆಯಲ್ಲಿ ಅಂತಿಮ ತೀರ್ಮಾನ ಆಗುತ್ತೆ ಎಂದರು.

ಜಿ.ಟಿ.ಹರೀಶ್ ಗೌಡ ಸುದ್ದಿಗೋಷ್ಟಿ

ರಾಜ್ಯದ ಎಲ್ಲಾ ಡಿಸಿಸಿ ಬ್ಯಾಂಕ್‌ಗಳಿಂದ 13 ಸಾವಿರ ಕೋಟಿ ಬೆಳೆ‌ ಸಾಲ‌ ನೀಡಲಾಗಿದೆ‌. ಮಹಾಮಾರಿ ಕೊರೊನಾ ಗ್ರಾಮೀಣ ಭಾಗಕ್ಕೂ ಆವರಿಸಿ ಸಾವು-ನೋವುಗಳಾಗಿವೆ. ಕೊರೊನಾಗೆ ಬಲಿಯಾದ ರೈತ ಕುಟುಂಬಗಳು ಬೀದಿ ಪಾಲಾಗುತ್ತಿವೆ. ಹೀಗಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಅವರು ಹೇಳಿದರು.

ಮೈಸೂರು ಚಾಮರಾಜನಗರ ಡಿಸಿಸಿ ಬ್ಯಾಂಕ್ ವ್ಯಾಪ್ತಿಯಲ್ಲಿ 280 ಮಂದಿ ರೈತರು ಮೃತಪಟ್ಟಿದ್ದಾರೆ. ಈ 280 ರೈತರ 2.10 ಕೋಟಿ ಸಾಲ ಮನ್ನಾ ಮಾಡಲು ಚಿಂತನೆ ನಡೆಸಲಾಗ್ತಿದೆ ಎಂದು ಹರೀಶ್‌ ಗೌಡ ತಿಳಿಸಿದ್ರು.

ABOUT THE AUTHOR

...view details