ಮೈಸೂರು : ಕೊರೊನಾದಿಂದಾಗಿ ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿವೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಎಂ.ಮಹಾಂತೇಶಪ್ಪ ಅಭಿಪ್ರಾಯಪಟ್ಟಿದ್ದಾರೆ.
ಇದಕ್ಕೆ ನಿಖರ ಕಾರಣಗಳಿಲ್ಲದಿದ್ದರೂ ಕೊರೊನಾ ಸಮಯದಲ್ಲಿ ಆತ್ಮಹತ್ಯೆ ಪ್ರಕರಣಗಳಂತೂ ಕಡಿಮೆಯಾಗಿವೆ ಎಂದಿದ್ದಾರೆ. 2017, 2018,2019ರ ಸಾಲಿನಲ್ಲಿ ಪ್ರತಿ ವರ್ಷ ರೈತರ ಆತ್ಮಹತ್ಯೆ ಪ್ರಕರಣಗಳು 100ಕ್ಕೂ ಹೆಚ್ಚಿರುತ್ತಿದ್ದವು. ಆದರೆ, ಕಳೆದ ವರ್ಷ ಆರಂಭಗೊಂಡು ಈವರೆಗೆ ರೈತರ ಆತ್ಮಹತ್ಯೆ ಪ್ರಕರಣ ಶೇ.70ರಷ್ಟು ಕಡಿಮೆಯಾಗಿವೆ ಎಂದಿದ್ದಾರೆ.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಎಂ.ಮಹಾಂತೇಶಪ್ಪ ಅಲ್ಲದೆ ದೂರದ ನಗರದಿಂದ ಬಂದವರು ಹಾಗೂ ರೈತರು ಜಮೀನುಗಳಿಗೆ ತೆರಳಿ ಕೃಷಿ ಕ್ಷೇತ್ರದಲ್ಲಿ ಮತ್ತಷ್ಟು ತೊಡಗಿಸಿಕೊಂಡಿದ್ದಾರೆ. ಈ ಬೆಳವಣಿಗೆ ಆಶಾದಾಯಕವಾಗಿದ್ದು, ಉತ್ಪಾದನೆ ಹೆಚ್ಚಾಗಲಿದೆ ಎಂದರು.
ಅಲ್ಲದೆ ಜಿಲ್ಲೆಗೆ 165 ಮಿ.ಮೀ ಮಳೆಯಾಗಬೇಕಾಗಿತ್ತು. ಆದರೆ, ಈವರೆಗೆ 161 ಮೀ.ಮೀ ಮಳೆಯಾಗಿದೆ. ಶೇ.2ರಷ್ಟು ಮಳೆ ಪ್ರಮಾಣ ಕಡಿಮೆಯಾಗಿದೆ. 3,95,774 ಹೆಕ್ಟೇರ್ ಪ್ರದೇಶದಲ್ಲಿ 86,723 ಹೆಕ್ಟೆರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಆಗಿದೆ.
ಬಿತ್ತನೆ ಬೀಜ ಹಾಗೂ ರಸಗೊಬ್ಬರ ತೊಂದರೆ ಇಲ್ಲ, ಜಿಲ್ಲೆಯಲ್ಲಿ 1,200 ಕ್ವಿಂಟಲ್ ಬಿತ್ತನೆ ಬೀಜ ವಿತರಣೆಯಾಗಿದೆ. ಪಿಎಂ ಕಿಸಾನ್ ಯೋಜನೆಯಿಂದ 2,27,417 ರೈತರಿಗೆ 45.48 ಕೋಟಿ ರೂ.ಹಣ ಬಂದಿದೆ ಎಂದು ಹೇಳಿದ್ದಾರೆ.