ಮೈಸೂರು: ಎಪಿಎಂಸಿ ತಿದ್ದುಪಡಿ ಕಾಯ್ದೆ ವಿರೋಧಿಸಿ ನೂತನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಬಂಧಿಸಿ ನಂತರ ಬಿಡುಗಡೆ ಮಾಡಲಾಗಿದೆ.
ಮೈಸೂರು: ಎಪಿಎಂಸಿ ತಿದ್ದುಪಡಿ ಕಾಯ್ದೆ ವಿರುದ್ಧ ರೈತರ ಪ್ರತಿಭಟನೆ ಬಂಧನ, ಬಿಡುಗಡೆ - APMC bill
ಸಚಿವ ಎಸ್.ಟಿ.ಸೋಮಶೇಖರ್ ಅವರಿಗೆ ಮನವಿ ನೀಡಲು ರೈತರು ಬಂದಿದ್ದಾರೆ. ಈ ವೇಳೆ, ಓರ್ವ ರೈತ ಮಾತ್ರ ಹೋಗಿ ಮನವಿ ನೀಡಿ ಬನ್ನಿ ಎಂದು ಪೊಲೀಸರು ಹೇಳಿದ್ದಾರೆ. ಇದಕ್ಕೆ ಅಸಮಾಧಾನಗೊಂಡ ರೈತರು, ನಮ್ಮ ಬಳಿಯೇ ಸಚಿವರನ್ನ ಕರೆಯಿಸಿ ಎಂದು ಒತ್ತಡ ಹಾಕಿದ್ದಕ್ಕೆ ಪೊಲೀಸರು ಹಾಗೂ ರೈತರ ನಡುವೆ ವಾಗ್ವಾದ ನಡೆದಿದೆ.
ಎಪಿಎಂಸಿ ತಿದ್ದುಪಡಿ ಕಾಯ್ದೆ ವಿರುದ್ಧ ರೈತರ ಪ್ರತಿಭಟನೆ ಬಂಧನ,ಬಿಡುಗಡೆ
ಎಪಿಎಂಸಿ ತಿದ್ದುಪಡಿ ಕಾಯ್ದೆ ರದ್ದು ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರಿಗೆ ಮನವಿ ನೀಡಲು ರೈತರು ಬಂದಿದ್ದಾರೆ. ಈ ವೇಳೆ, ಓರ್ವ ರೈತ ಮಾತ್ರ ಹೋಗಿ ಮನವಿ ನೀಡಿ ಬನ್ನಿ ಎಂದು ಪೊಲೀಸರು ಹೇಳಿದ್ದಾರೆ. ಇದಕ್ಕೆ ಅಸಮಾಧಾನಗೊಂಡ ರೈತರು, ನಮ್ಮ ಬಳಿಯೇ ಸಚಿವರನ್ನ ಕರೆಸಿ ಎಂದು ಒತ್ತಡ ಹಾಕಿದ್ದಕ್ಕೆ ಪೊಲೀಸರು ಹಾಗೂ ರೈತರ ನಡುವೆ ವಾಗ್ವಾದ ನಡೆದಿದೆ.
ಈ ಹಿನ್ನೆಲೆ ಪರಿಸ್ಥಿತಿ ಶಾಂತಗೊಳಿಸಲು ಕೆಲ ರೈತರನ್ನು ಬಂಧಿಸಿದ ಪೊಲೀಸರು, ನಂತರ ಬಿಡುಗಡೆ ಮಾಡಿ ಕಳುಹಿಸಿದ್ದಾರೆ.