ಕರ್ನಾಟಕ

karnataka

ETV Bharat / state

ರಾಕೇಶ್ ಟಿಕಾಯತ್ ಕಾರ್​​ ಮೇಲೆ ದಾಳಿ: ಕ್ರಮಕ್ಕೆ ಒತ್ತಾಯಿಸಿ ಮೈಸೂರಲ್ಲಿ ಪ್ರತಿಭಟನೆ - mysore latest news

ರಾಜಸ್ತಾನದ ಅಲ್ಮೋರಾ ಜಿಲ್ಲೆಯಲ್ಲಿ ರೈತ ಪಂಚಾಯತ್ ಸಭೆಗೆ ಹೋಗುವಾಗ, ರಾಕೇಶ್ ಟಿಕಾಯತ್ ಅವರ ಗಾಡಿ ಮೇಲೆ ದಾಳಿ ಮಾಡುವ ಮೂಲಕ ಬಿಜೆಪಿ ಕಾರ್ಯಕರ್ತರು ಗೂಂಡಾವರ್ತನೆ ತೋರಿದ್ದಾರೆಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

farmers protest at mysore
ರಾಕೇಶ್ ಟಿಕಾಯತ್ ಕಾರ್​​ ಮೇಲೆ ದಾಳಿ; ಕ್ರಮಕ್ಕೆ ಒತ್ತಾಯ

By

Published : Apr 3, 2021, 6:35 PM IST

ಮೈಸೂರು: ರಾಷ್ಟ್ರೀಯ ಸಂಯುಕ್ತ ಕಿಸಾನ್ ಮೋರ್ಚಾ ಅಧ್ಯಕ್ಷ ರಾಕೇಶ್ ಟಿಕಾಯತ್ ಕಾರ್​​ ಮೇಲೆ ದಾಳಿ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ನ್ಯಾಯಾಲಯದ ಮುಂಭಾಗವಿರುವ ಗಾಂಧೀಜಿ ಪುತ್ಥಳಿ ಎದುರು ಪ್ರತಿಭಟನೆ ನಡೆಸಿದರು.

ರಾಜಸ್ಥಾನದ ಅಲ್ಮೋರಾ ಜಿಲ್ಲೆಯಲ್ಲಿ ರೈತ ಪಂಚಾಯತ್ ಸಭೆಗೆ ಹೋಗುವಾಗ, ರಾಕೇಶ್ ಟಿಕಾಯತ್ ಅವರ ಗಾಡಿ ಮೇಲೆ ದಾಳಿ ಮಾಡುವ ಮೂಲಕ ಬಿಜೆಪಿ ಕಾರ್ಯಕರ್ತರು ಗೂಂಡಾವರ್ತನೆ ತೋರಿದ್ದಾರೆ. ಇಂತಹವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಇದನ್ನೂ ಓದಿ:ರಾಕೇಶ್ ಟಿಕಾಯತ್​ಗೆ ಕಪ್ಪು ಧ್ವಜ ತೋರಿಸಿ, ಕಾರಿನ ಮೇಲೆ ದಾಳಿ ನಡೆಸಿದ್ದ 14 ಯುವಕರ ಬಂಧನ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಯ ವಿರುದ್ಧ ಹೋರಾಟ ಮಾಡುವುದನ್ನ ಅಪರಾಧ ಎಂಬಂತೆ ಬಿಂಬಿಸಲಾಗುತ್ತಿದೆ. ಕೇಂದ್ರ ಸರ್ಕಾರಕ್ಕೆ ರೈತ ಪರ ಕಾಳಜಿ ಇಲ್ಲದಂತಾಗಿದೆ. ರಾಕೇಶ್ ಟಿಕಾಯತ್ ಮೇಲೆಗೆ ಹಲ್ಲೆಗೆ ಯತ್ನ ನಡೆಸಿದ್ದು, ಇದು ರೈತರನ್ನು ಕುಗ್ಗಿಸುವುದಿಲ್ಲ. ರೈತರನ್ನ ಮತ್ತಷ್ಟು ಬಲಿಷ್ಠಗೊಳಿಸಿದೆ ಎಂದು ಕಿಡಿಕಾರಿದರು.

ABOUT THE AUTHOR

...view details