ಮೈಸೂರು :ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದೆ ಆ ಬೆಳೆಗಳನ್ನೆಲ್ಲ ಎಪಿಎಂಸಿ ಮಾರುಕಟ್ಟೆಯಲ್ಲೆ ರೈತರು ಬಿಸಾಡಿ ಹೋಗುತ್ತಿದ್ದಾರೆ. ಲಾಕ್‌ಡೌನ್‌ನಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು ಕಷ್ಟಪಟ್ಟು ಬೆಳೆದ ತರಕಾರಿ ಬೆಳೆಗಳನ್ನು ಮಾರಾಟಕ್ಕಾಗಿ ಮಾರುಕಟ್ಟೆಗೆ ತಂದರೆ ಇಲ್ಲಿ ಕೊಳ್ಳುವವರೇ ಇಲ್ಲ. ತಂದ ಕೂಲಿಯೂ ಸಹ ಸಿಗುತ್ತಿಲ್ಲ ಎಂದು ರೈತರು ತರಕಾರಿಗಳನ್ನು ಮಾರುಕಟ್ಟೆಯಲ್ಲಿ ಬಿಸಾಡಿ ಹೋಗುತ್ತಿದ್ದಾರೆ. ಆ ತರಕಾರಿಗಳನ್ನು ಬಿಡಾಡಿ ದನಗಳು ತಿನ್ನುತ್ತಿವೆ.
ಬೆಲೆ ಇಲ್ಲದೆ ತರಕಾರಿಗಳನ್ನು ಮಾರುಕಟ್ಟೆಯಲ್ಲಿ ಸುರಿದು ಹೋಗುತ್ತಿರುವ ರೈತರು..
ಮೈಸೂರಿನ ಎಪಿಎಂಸಿ ಮಾರುಕಟ್ಟೆಗೆ ರೈತರು ಕಷ್ಟಪಟ್ಟು ತಾವು ಬೆಳೆದ ಟೊಮ್ಯಾಟೊ, ಕುಂಬಳಕಾಯಿ, ಹೀರೇಕಾಯಿ, ಹೂಕೋಸು ಸೇರಿ ಇತರ ತರಕಾರಿಗಳನ್ನು ತಂದಿದ್ರೂ ಕೊಳ್ಳುವವರೇ ಇಲ್ಲವಾಗಿದ್ದಾರೆ.
ಮೈಸೂರಿನ ಎಪಿಎಂಸಿ ಮಾರುಕಟ್ಟೆಗೆ ರೈತರು ಕಷ್ಟಪಟ್ಟು ತಾವು ಬೆಳೆದ ಟೊಮ್ಯಾಟೊ, ಕುಂಬಳಕಾಯಿ, ಹೀರೇಕಾಯಿ, ಹೂಕೋಸು ಸೇರಿ ಇತರ ತರಕಾರಿಗಳನ್ನು ತಂದಿದ್ರೂ ಕೊಳ್ಳುವವರೇ ಇಲ್ಲವಾಗಿದ್ದಾರೆ. ತರಕಾರಿ ಬೆಳೆಗಳಿಗೆ ರೇಟ್ ಇಲ್ಲ, ರೇಟು ಇದ್ದರೂ ರೈತರು ಬಾಡಿಗೆ ಕೊಡುವಷ್ಟು ಬೆಲೆಯೂ ಸಿಗುತ್ತಿಲ್ಲ.
1ಕೆಜಿ ಕುಂಬಳಕಾಯಿಯನ್ನ 2 ರೂಪಾಯಿಗೆ ಕೇಳುತ್ತಾರೆ. ಆದ್ದರಿಂದ ಕುಂಬಳಕಾಯಿಯನ್ನು ದನಕ್ಕೆ ಹಾಕುತ್ತಿದ್ದಾರೆ. ಇನ್ನು ಜಮೀನುಗಳಿಂದ ತರಕಾರಿಗಳನ್ನು ತರಲು ಪೊಲೀಸರು ಬಿಡುತ್ತಿಲ್ಲ, ಮಾರುಕಟ್ಟೆಯಲ್ಲಿ ತರಕಾರಿಕೊಳ್ಳಲು ಕೇರಳ, ತಮಿಳುನಾಡಿನಿಂದ ವ್ಯಾಪಾರಸ್ಥರು ಬರುತ್ತಿಲ್ಲ ಎಂದು ತರಕಾರಿ ಮಾರುಕಟ್ಟೆಯಲ್ಲಿ ಕೆಲಸ ಮಾಡುವ ಸಲ್ಮಾನ್ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಇಂತಹ ಕಷ್ಟದಲ್ಲಿ ರೈತರ ತರಕಾರಿಗಳನ್ನು ಸರ್ಕಾರವೇ ಖರೀದಿಸಿ ಬೆಂಬಲ ಬೆಲೆ ನೀಡಬೇಕೆಂದು ರೈತ ಮುಖಂಡ ಕುರುಬೂರು ಶಾಂತಕುಮಾರ್ ಸರ್ಕಾರವನ್ನ ಆಗ್ರಹಿಸಿದ್ದಾರೆ.