ಮೈಸೂರು:2023 -24ನೇ ಸಾಲಿನ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ - ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯನ್ನು ಕರ್ನಾಟಕ ಸರ್ಕಾರದ ವತಿಯಿಂದ ಜಾರಿಗೊಳಿಸುವ ಸಂಬಂಧ ಅಧಿಸೂಚನೆ ಹೊರಡಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಮೈಸೂರು ಜಿಲ್ಲೆಯಲ್ಲಿ 19 ಬೆಳೆಗಳಿಗೆ ರೈತರು ಬೆಳೆ ವಿಮೆ ಮಾಡಿಸಬಹುದಾಗಿರುತ್ತದೆ.
ಜಿಲ್ಲೆಗೆ ಅಧಿಸೂಚನೆ ಮಾಡಿರುವ ಬೆಳೆಗಳ ವಿಮಾ, ವಿಮಾ ಕಂತು ಮತ್ತು ಅಂತಿಮ ನೊಂದಣಿ ದಿನಾಂಕದ ವಿವರ:ಎಳ್ಳಿನ ಬೆಳೆಗೆ (ಮಳೆಯಾಶ್ರಿತ) ಪ್ರತಿ ಎಕರೆಗೆ ವಿಮಾ ಮೊತ್ತ 11,635.13 ರೂ.ಗಳಿದ್ದು ವಿಮಾ ಕಂತು 232.70 ರೂ., ಸೂರ್ಯಕಾಂತಿ ಬೆಳೆಗೆ(ಮಳೆಯಾಶ್ರಿತ) ಪ್ರತಿ ಎಕರೆಗೆ ವಿಮಾ ಮೊತ್ತ, ರೂ. 16491.53, ವಿಮಾ ಕಂತು ರೂ. 329.83, ಉದ್ದು ಬೆಳೆಗೆ(ಮಳೆಯಾಶ್ರಿತ) ಪ್ರತಿ ಎಕರೆಗೆ ವಿಮಾ ಮೊತ್ತ 13253.93 ರೂಗಳಿದ್ದು, ವಿಮಾ ಕಂತು 265.08 ರೂ. ಹೆಸರು ಬೆಳೆಗೆ(ಮಳೆಯಾಶ್ರಿತ) ಪ್ರತಿ ಎಕರೆಗೆ ವಿಮಾ ಮೊತ್ತ 13456.28 ರೂ ಗಳಿದ್ದು ವಿಮಾ ಕಂತು 269.13 ರೂಗಳು. ಅಲಸಂಡೆ ಬೆಳೆಗೆ (ಮಳೆಯಾಶ್ರಿತ) ಪ್ರತಿ ಎಕರೆಗೆ ವಿಮಾ ಮೊತ್ತ 12141.00 ರೂ.ಗಳಿದ್ದು ವಿಮಾ ಕಂತು 1699.74 ರೂ.ಗಳಾಗಿದ್ದು, ನೋಂದಾಯಿಸಿಕೊಳ್ಳಲು ಜೂನ್ 30 ಅಂದರೆ ನಾಳೆ ಅಂತಿಮ ದಿನವಾಗಿದೆ.
ನೆಲಗಡಲೆ ಬೆಳೆಗೆ(ಮಳೆಯಾಶ್ರಿತ) ಪ್ರತಿ ಎಕರೆಗೆ ವಿಮಾ ಮೊತ್ತ 22056.15 ರೂ ಗಳಿದ್ದು, ವಿಮಾ ಕಂತು 441.12 ರೂ ಗಳು. ಇನ್ನು ಎಲೆಕೋಸು-ಓS ಬೆಳೆಗೆ ಪ್ರತಿ ಎಕರೆಗೆ ವಿಮಾ ಮೊತ್ತ 30554.85 ರೂ. ಗಳಿದ್ದು ವಿಮಾ ಕಂತು 1527.74 ರೂ. ಆಲೂಗಡ್ಡೆ ಬೆಳೆಗೆ (ಮಳೆಯಾಶ್ರಿತ) ಪ್ರತಿ ಎಕರೆಗೆ ವಿಮಾ ಮೊತ್ತ 29239.58 ರೂ ಗಳಿದ್ದು ವಿಮಾ ಕಂತು 1461.98 ರೂ. ಟೊಮೆಟೊ-ಓS ಬೆಳೆಗೆ ಪ್ರತಿ ಎಕರೆಗೆ ವಿಮಾ ಮೊತ್ತ 57265.05 ರೂ ಗಳಿದ್ದು, ವಿಮಾ ಕಂತು 2863.25 ರೂ. ಜೋಳ ಬೆಳೆಗೆ (ಮಳೆಯಾಶ್ರಿತ) ಪ್ರತಿ ಎಕರೆಗೆ ವಿಮಾ ಮೊತ್ತ 15479.78 ರೂ ಗಳಿದ್ದು, ವಿಮಾ ಕಂತು 309.60 ರೂಗಳಾಗಿದ್ದು, ನೋಂದಾಯಿಸಿಕೊಳ್ಳಲು ಜುಲೈ 15 ಅಂತಿಮ ದಿನವಾಗಿರುತ್ತದೆ.