ಮೈಸೂರು: ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಣಸೂರು ತಾಲೂಕಿನ ಚಿಕ್ಕಹೆಜ್ಜೂರು ಗ್ರಾಮದಲ್ಲಿ ನಡೆದಿದೆ.
ಬ್ಯಾಂಕ್ ಸಿಬ್ಬಂದಿ ಒತ್ತಡ: ನೆಂಟರ ಬಳಿ ಸಾಲ ಕೇಳಲು ಹೋದ ರೈತ ನೇಣಿಗೆ ಶರಣು - mysore news
ಸಾಲದ ಹೊರೆ ಜೊತೆಗೆ ಬ್ಯಾಂಕ್ ನವರ ಒತ್ತಡ ಹೆಚ್ಚಾದ ಹಿನ್ನೆಲೆ ಮನನೊಂದು ಸಾಲ ತೀರಿಸಲು ಸಂಬಂಧಿಕರ ಬಳಿ ಕೈ ಸಾಲ ಪಡೆದುಕೊಂಡು ಬರುತ್ತೇನೆ ಎಂದು ಹೋದವ ಈಗ ಶವವಾಗಿ ಪತ್ತೆಯಾಗಿದ್ದಾನೆ.
ಸಾಲಬಾಧೆ ತಾಳಲಾರದೆ ಆತ್ಮಹತ್ಯೆಗೆ ಶರಣಾದ ರೈತ
ರೈತ ಸುರೇಶ್ (45) ಈತ ಹುಣಸೂರು ತಾಲೂಕಿನ ಚಿಕ್ಕಹೆಜ್ಜೂರು ಗ್ರಾಮದ ನಿವಾಸಿಯಾಗಿದ್ದು , ಈತನಿಗೆ ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳಿದ್ದಾರೆ. ಈ ರೈತ ಬೆಳೆ ಸಾಲ ಮಾಡಿಕೊಂಡಿದ್ದನು. ಅಲ್ಲದೆ, ಹೆಚ್.ಡಿ.ಎಫ್.ಸಿ ಬ್ಯಾಂಕ್ ನಲ್ಲಿ ಟ್ರ್ಯಾಕ್ಟರ್ ಸಾಲವಾಗಿ 5 ಲಕ್ಷ ಪಡೆದುಕೊಂಡಿದ್ದು, ಸಾಲದ ಹೊರೆ ಜೊತೆಗೆ ಬ್ಯಾಂಕ್ ನವರ ಒತ್ತಡ ಹೆಚ್ಚಾದ ಹಿನ್ನೆಲೆ ಮನನೊಂದು ಸಾಲ ತೀರಿಸಲು ಸಂಬಂಧಿಕರ ಬಳಿ ಕೈ ಸಾಲ ಪಡೆದುಕೊಂಡು ಬರುತ್ತೇನೆ ಎಂದು ಹೋದವ ಈಗ ಶವವಾಗಿ ಪತ್ತೆಯಾಗಿದ್ದಾನೆ.
ಈ ಸಂಬಂಧ ಬೈಲಕೊಪ್ಪ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.