ಮೈಸೂರು: ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮುಂಡೇಶ್ವರಿ ಕ್ಷೇತ್ರದ ಕಂಬ್ರಳ್ಳಿಯಲ್ಲಿ ಸಂಭವಿಸಿದೆ.
ಮೈಸೂರಿನಲ್ಲಿ ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ - ರೈತ ಆತ್ಮಹತ್ಯೆ
ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮುಂಡೇಶ್ವರಿ ಕ್ಷೇತ್ರದ ಕಂಬ್ರಳ್ಳಿಯಲ್ಲಿ ಸಂಭವಿಸಿದೆ.
ರೈತ ಆತ್ಮಹತ್ಯೆ
ಕಂಬ್ರಳ್ಳಿಯ ಕೆಂಡಗಣ್ಣ ಸ್ವಾಮಿ ಅವರ ಪುತ್ರ ಲಕ್ಷ್ಮಣ (37) ಮೃತ ದುರ್ದೈವಿ. ಕೃಷಿ ಮಾಡುವ ಉದ್ದೇಶದಿಂದ ಸುಮಾರ 5 ಲಕ್ಷ ರೂ. ಕೈ ಸಾಲ ಮಾಡಿದ್ದರು. ಸಾಲ ಬಾಧೆಯಿಂದ ಮನನೊಮದು ವಿಷಪೂರಿತ ಮಾತ್ರೆ ಸೇವಿಸಿದ್ದಾರೆ. ಕೂಡಲೇ ಕೆ ಆರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಲಕ್ಷ್ಮಣ ಸಾವನ್ನಪ್ಪಿದ್ದಾರೆ. ಇಲವಾಲ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.