ಕರ್ನಾಟಕ

karnataka

ETV Bharat / state

ಬಾರದ ಮಳೆ, ಕೈ ಕೊಟ್ಟ ಬೆಳೆ: ಮನನೊಂದ ರೈತ ನೇಣಿಗೆ ಶರಣು - ಬಾರದ ಮಳೆ, ಕೈಕೊಟ್ಟ ಬೆಳೆ, ರೈತ ನೇಣಿಗೆ ಶರಣು, ಮೈಸೂರು, ಜಿಲ್ಲೆಯ ಕೆ.ಆರ್.ನಗರ ತಾಲ್ಲೂಕಿನ ಮುದ್ದಿನಹಳ್ಳಿ ಗ್ರಾಮ, ವಿರೂಪಾಕ್ಷ ಆತ್ಮಹತ್ಯೆ ಮಾಡಿಕೊಂಡ ರೈತ, ಕನ್ನಡ ವಾರ್ತೆ, ಈ ಟಿವಿ ಭಾರತ

ಮಳೆ ಕೈ ಕೊಟ್ಟ ಕಾರಣ ಬೆಳೆದಿದ್ದ ಬೆಳೆ ಒಣಗಿ, ಪಡೆದಿದ್ದ ಸಾಲವನ್ನೂ ತೀರಿಸಲು ಸಾಧ್ಯವಾಗದೆ ರೈತನೊಬ್ಬ ನೇಣಿಗೆ ಶರಣಾದ ಘಟನೆ ಮೈಸೂರಿನಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ರೈತ ವಿರೂಪಾಕ್ಷ

By

Published : Jul 18, 2019, 5:21 PM IST

ಮೈಸೂರು:ಮಳೆ ಬಾರದೆ ಬೆಳೆ ಕೈ ಕೊಟ್ಟ ಹಿನ್ನೆಲೆಯಲ್ಲಿ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಮುದ್ದಿನಹಳ್ಳಿ ಗ್ರಾಮದ ವಿರೂಪಾಕ್ಷ (55) ಆತ್ಮಹತ್ಯೆಗೆ ಶರಣಾದ ರೈತ. ವಿರೂಪಾಕ್ಷ ತನ್ನ 3 ಎಕರೆ ಜಮೀನಿನಲ್ಲಿ ತಂಬಾಕು ಬೆಳೆದಿದ್ದ. ಆದರೆ ಮಳೆ ಕೈ ಕೊಟ್ಟ ಕಾರಣ ತಂಬಾಕು ಬೆಳೆ ಒಣಗಿದ್ದು, ತಂಬಾಕು ಬೆಳೆಯಲು ಕಾವೇರಿ ಗ್ರಾಮೀಣ ಬ್ಯಾಂಕ್ ಹಾಗೂ ಇತರ ವ್ಯಕ್ತಿಗಳಿಂದ ಸುಮಾರು 10 ಲಕ್ಷ ಸಾಲ ಪಡೆದಿದ್ದ ಎನ್ನಲಾಗಿದೆ.

ಈ ಹಿನ್ನೆಲೆ ಮನನೊಂದು ಈತ ನೇಣಿಗೆ ಶರಣಾಗಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಸಾಲಿ ಗ್ರಾಮ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ABOUT THE AUTHOR

...view details