ಕರ್ನಾಟಕ

karnataka

ETV Bharat / state

ಜಮೀನಿಗೆ ನುಗ್ಗಿದ ಆನೆ ಓಡಿಸಲು ಹೋಗಿ ಗಾಯಗೊಂಡ ರೈತ - ಜಮೀನಿಗೆ ನುಗ್ಗಿದ ಆನೆ

ಹುಸ್ಕೂರು ಹಾಡಿಯ ಜಮೀನಿಗೆ ನುಗ್ಗಿ ಬೆಳೆದಿದ್ದ ಬೆಳೆಯನ್ನು ತಿಂದು ನಾಶ ಮಾಡಲು ಮುಂದಾದ ಆನೆ ಓಡಿಸಲು ಹೋದ ರೈತನಿಗೇ ತನ್ನ ಸೊಂಡಲಿನಿಂದ ತಳ್ಳಿ ಗಾಯಗೊಳಿಸಿರುವ ಘಟನೆ ಹೆಚ್ ಡಿ ಕೋಟೆ ತಾಲೂಕಿನಲ್ಲಿ ನಡೆದಿದೆ.

ಗಾಯಗೊಂಡ ವ್ಯಕ್ತಿ,Farmer injured

By

Published : Aug 5, 2019, 9:28 PM IST

ಮೈಸೂರು :ಜಮೀನಿನಲ್ಲಿ ಬೆಳೆದಿದ್ದ ಬೆಳೆಯನ್ನು ತಿಂದು ನಾಶ ಮಾಡಲು ಮುಂದಾದ ಆನೆಯನ್ನು ಓಡಿಸಲು ಹೋದ ವ್ಯಕ್ತಿಗೆ ಆನೆ ಸೊಂಡಲಿನಿಂದ ತಳ್ಳಿ ಗಾಯಗೊಳಿಸಿರುವ ಘಟನೆ ಹೆಚ್‌ಡಿಕೋಟೆ ತಾಲೂಕಿನಲ್ಲಿ ನಡೆದಿದೆ.

ಹುಸ್ಕೂರು ಹಾಡಿಯಮಹಾದೇವ (50) ಗಾಯಗೊಂಡಿರುವ ರೈತ. ಇವರ ಜಮೀನಿಗೆ ಆನೆಯೊಂದು ನುಗ್ಗಿ ಬೆಳೆಯನ್ನು ತಿಂದು ಜಮೀನನ್ನು ಹಾಳು ಮಾಡುತ್ತಿತ್ತು. ಇದನ್ನು ಗಮನಿಸಿದ ಮಹಾದೇವ ಆನೆಯನ್ನು ಓಡಿಸಲು ಮುಂದಾಗಿದ್ದಾರೆ. ಇದರಿಂದ ಗಾಬರಿಗೊಂಡ ಆನೆ ಸೊಂಡಿಲಿನಿಂದ ತಳ್ಳಿ ಪರಾರಿಯಾಗಿದೆ.ಗಾಯಾಳು ಮಹಾದೇವರನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಮಾಹಿತಿ ತಿಳಿದ ಅರಣ್ಯ ಇಲಾಖೆ ಆಸ್ಪತ್ರೆಗೆ ಧಾವಿಸಿದೆ.

ABOUT THE AUTHOR

...view details