ಮೈಸೂರು:ಕೃಷಿ ಚಟುವಟಿಕೆಗಾಗಿ ಮಾಡಿದ್ದ 10 ಲಕ್ಷ ರೂಪಾಯಿ ಸಾಲ ತೀರಿಸಲಾಗದೇ, ಮನನೊಂದ ರೈತ ನಾಲೆಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜನಗೂಡಿನ ಕಾರ್ಯ ಗ್ರಾಮದಲ್ಲಿ ನಡೆದಿದೆ.
ಮೈಸೂರು: 10 ಲಕ್ಷ ರೂ. ಸಾಲ ತೀರಿಸಲಾಗದೆ ನಾಲೆಗೆ ಜಿಗಿದು ರೈತ ಆತ್ಮಹತ್ಯೆ - ನಂಜನಗೂಡಿನಲ್ಲಿ ರೈತ ಆತ್ಮಹತ್ಯೆ ಸುದ್ದಿ
ನಂಜನಗೂಡಿನ ಕಾರ್ಯ ಗ್ರಾಮದಲ್ಲಿ ಕೃಷಿ ಚಟುವಟಿಕೆಗೆಂದು 10 ಲಕ್ಷ ರೂ. ಸಾಲ ಮಾಡಿದ್ದ ರೈತನೊಬ್ಬ ಸಾಲ ತೀರಿಸಲಾಗದೇ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ.
ರೈತ ಆತ್ಮಹತ್ಯೆ
ಗ್ರಾಮದ ನಂಜುಂಡಪ್ಪ (68) ತಡಗೂರು ರಾಮಚಂದ್ರ ನಾಲೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ರೈತ. ಜಮೀನಲ್ಲಿ ಕೊರೆಸಿದ್ದ ಮೂರು ಬೋರ್ವೆಲ್ಗಳು ಕೈಕೊಟ್ಟ ಹಿನ್ನೆಲೆ ಬಹಳಷ್ಟು ಬೇಸರಗೊಂಡಿದ್ದರು. ಭಾನುವಾರ ಮನೆಯಿಂದ ಜಮೀನಿಗೆ ಹೋದವರು ವಾಪಸ್ ಮನೆಗೆ ಬಂದಿರಲಿಲ್ಲ. ಕುಟುಂಬದವರಿಗೆ ಸಾಲದ ಬಗ್ಗೆ ತಿಳಿಸಿ ಬೇಸರ ವ್ಯಕ್ತಪಡಿಸಿದ್ದರು ಎನ್ನಲಾಗ್ತಿದೆ.
ಇಂದು ತಿ.ನರಸೀಪುರದ ಸುಜ್ಜಲೂರು ಗ್ರಾಮದ ಬಳಿ ನಂಜುಂಡಪ್ಪನ ಮೃತದೇಹ ಪತ್ತೆಯಾಗಿದೆ. ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.