ಕರ್ನಾಟಕ

karnataka

ETV Bharat / state

ಎಷ್ಟೇ ಮನವಿ ಮಾಡಿದರೂ ಟಿ.ಸಿ ಹಾಕದ ಅಧಿಕಾರಿಗಳು: ಕಂಗಾಲಾದ ರೈತ - farmer Appealed For the T.C

ಕಳೆದ ಒಂದು ತಿಂಗಳಿಂದ ಕೆಟ್ಟು ಹೋಗಿರುವ ವಿದ್ಯುತ್ ಟ್ರಾನ್ಸ್ ಫಾರ್ಮರ್ (ಟಿಸಿ) ಬದಲಾಯಿಸಲು ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು ಹನಗೂಡು ಹೋಬಳಿಯ ಚಿಕ್ಕ ಹೆಜ್ಜುರೂ ಗ್ರಾಮದ ರೈತರು ದೂರಿದ್ದಾರೆ.

farmer Appealed For the T.C
ಎಷ್ಟೇ ಮನವಿ ಮಾಡಿದರೂ ಟಿ.ಸಿ ಹಾಕದ ಅಧಿಕಾರಿಗಳ: ಕಂಗಾಲಾದ ರೈತ

By

Published : Apr 20, 2020, 9:10 PM IST

ಮೈಸೂರು: ಎಷ್ಟೇ ಮನವಿ ಮಾಡಿದರೂ ಕಳೆದ ಒಂದು ತಿಂಗಳಿಂದ ಕೆಟ್ಟು ಹೋಗಿರುವ ವಿದ್ಯುತ್ ಟ್ರಾನ್ಸ್ ಫಾರ್ಮರ್ (ಟಿಸಿ) ಬದಲಾಯಿಸಲು ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು ಹನಗೂಡು ಹೋಬಳಿಯ ಚಿಕ್ಕ ಹೆಜ್ಜುರೂ ಗ್ರಾಮದ ರೈತರು ಆರೋಪಿಸಿದ್ದಾರೆ.

ಎಷ್ಟೇ ಮನವಿ ಮಾಡಿದರೂ ಟಿ.ಸಿ ಹಾಕದ ಅಧಿಕಾರಿಗಳು: ಕಂಗಾಲಾದ ರೈತ
ಲಾಕ್ ಡೌನ್ ನಿಂದ ರೈತ ಬೆಳೆದ ಬೆಳೆ ಜಮೀನಿನಲ್ಲೆ ಕೊಳೆಯುತ್ತಿದ್ದರೆ, ಇತ್ತ ತಾನು ಬೆಳೆದ ಬೆಳೆಗೆ ನೀರು ಹಾಯಿಸಲು ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ವಿದ್ಯುತ್ ಟ್ರಾನ್ಸ್‌‌ ಫಾರ್ಮರ್ ಕೆಟ್ಟು ಒಂದು ತಿಂಗಳಾದರೂ ಅಧಿಕಾರಿಗಳು ಗಮನ ಹರಿಸುತ್ತಿಲ್ಲ.
ಕೊನೆಗೆ ರೈತರೆಲ್ಲ ಒಟ್ಟಾಗಿ ಗುತ್ತಿಗೆದಾರ ಹಾಗೂ ವಿದ್ಯುತ್ ಇಲಾಖೆಯ ಜೂನಿಯರ್ ಇಂಜಿನಿಯರ್ ಅವರನ್ನು ಸಂಪರ್ಕಿಸಿ ಮನವಿ ಮಾಡಿದ್ದೆವು. ಆದ್ರೆ ಅಧಿಕಾರಿಗಳು ಮಾತ್ರ ನಮ್ಮ ಕಡೆ ಗಮನ ಹರಿಸಿಲ್ಲ ಎಂದು ರೈತ ಮಲ್ಲಿಕಾರ್ಜುನ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಚಿಕ್ಕ ಹೆಜ್ಜುರೂ ಗ್ರಾಮ ಹುಣಸೂರು ತಾಲೂಕಿನ ಹನಗೂಡು ಹೋಬಳಿಯ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಾಡಂಚಿನ ಗ್ರಾಮ. ಇಲ್ಲಿ ಈ ಟ್ರಾನ್ಸ್ ಫಾರ್ಮರ್ ಹಾಳಾಗಿದ್ದರಿಂದ ಹಾಡಿ ಹಾಗೂ ಚಿಕ್ಕ ಹೆಜ್ಜುರೂ ಗ್ರಾಮಕ್ಕೆ ಕುಡಿಯುವ ನೀರಿಗೂ ಸಮಸ್ಯೆಯಾಗಿದೆ. ಅಧಿಕಾರಿಗಳ ವರ್ತನೆಯಿಂದ ರೈತರು ಬೇಸತ್ತಿದ್ದು, ಉಸ್ತುವಾರಿ ಸಚಿವರ ಗಮನಕ್ಕೆ ತರಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.

ABOUT THE AUTHOR

...view details