ಮೈಸೂರು: ನಟ ಪುನೀತ್ ರಾಜ್‌ಕುಮಾರ್ ಅವರ ಅಗಲಿಕೆ ನೋವು ಅಭಿಮಾನಿಗಳಿಗೆ ಇಂದಿಗೂ ಅರಗಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ, ಇಂದಿಗೂ ತಮ್ಮ ನೆಚ್ಚಿನ ನಟನ ಪುಣ್ಯ ಸ್ಮರಣೆ ಮಾಡುತ್ತಲೇ ಇದ್ದಾರೆ. ಅದೇ ರೀತಿ ಜಿಲ್ಲೆಯಲ್ಲಿ ಅಭಿಮಾನಿಯೊಬ್ಬರು ಮುಡಿ ಕೊಟ್ಟು ಅಭಿಮಾನ ಮೆರೆದಿದ್ದಾರೆ.
ನಂಜನಗೂಡು ತಾಲೂಕಿನ ಹಳ್ಳಿದಿಡ್ಡಿ ಗ್ರಾಮದಲ್ಲಿ ನಟ ಪುನೀತ್ ಅವರ ಭಾವಚಿತ್ರದ ಮುಂದೆ ಅಭಿಮಾನಿಗಳು ಬಿರಿಯಾನಿ, ಹಣ್ಣು- ಹಂಪಲು, ತಿಂಡಿ ತಿನಿಸುಗಳನ್ನಿಟ್ಟು ಪೂಜೆ ಮಾಡಿ ಮೆರವಣಿಗೆ ಮಾಡಿದರು. ಅನಂತರ ಗ್ರಾಮದಲ್ಲಿ ಅನ್ನ ಸಂತರ್ಪಣೆ ಮಾಡಿದ ಅಭಿಮಾನಿಗಳು ನೆಚ್ಚಿನ ನಟ ಪುನೀತ್ ರಾಜ್‌ಕುಮಾರ್ ನೆನೆದು ಭಾವುಕರಾದರು.