ಮೈಸೂರು:ದಿ.ನಟ ಪುನೀತ್ ರಾಜ್‌ಕುಮಾರ್ ಅವರ ಭಾವಚಿತ್ರವಿರುವ ಬೆಳ್ಳಿ ಡಾಲರ್ ಅನ್ನು ಶಕ್ತಿಧಾಮದ ಮಕ್ಕಳಿಗೆ ಅಭಿಮಾನಿಯೊಬ್ಬರು ನೀಡಿದ್ದಾರೆ. ಬೆಂಗಳೂರಿನ ದೇವಿನಗರದ ನಿವಾಸಿ ಅರ್ಜುನ, ಪತ್ನಿ ಬೃಂದಾಶ್ರೀ 50ಕ್ಕೂ ಹೆಚ್ಚು ಬೆಳ್ಳಿ ಡಾಲರ್ಗಳನ್ನು ಶಕ್ತಿಧಾಮದ ಆಡಳಿತ ಮಂಡಳಿಗೆ ಹಸ್ತಾಂತರಿಸಿದರು.
ಪುನೀತ್ ಭಾವಚಿತ್ರದ ಬೆಳ್ಳಿ ಡಾಲರ್: ಶಕ್ತಿಧಾಮದ ಮಕ್ಕಳಿಗೆ ಅಭಿಮಾನಿ ದಂಪತಿಯ ಗಿಫ್ಟ್ - ಪುನೀತ್ ರಾಜ್ ಕುಮಾರ್ ಭಾವಚಿತ್ರ ಇರುವ ಬೆಳ್ಳಿ ಡಾಲರ್
ಪುನೀತ್ ರಾಜ್‌ಕುಮಾರ್ ಭಾವಚಿತ್ರವಿರುವ 50ಕ್ಕೂ ಹೆಚ್ಚು ಬೆಳ್ಳಿ ಡಾಲರ್ಗಳನ್ನು ಅವರ ಅಭಿಮಾನಿಯೊಬ್ಬರು ಶಕ್ತಿಧಾಮದ ಮಕ್ಕಳಿಗೆ ನೀಡಿದರು.
ಪುನೀತ್ ರಾಜ್ ಕುಮಾರ್ ಭಾವಚಿತ್ರ ಇರುವ ಬೆಳ್ಳಿ ಡಾಲರ್
ಇದನ್ನೂ ಓದಿ:ದಿ ಕಾಶ್ಮೀರ್ ಫೈಲ್ಸ್ ಸಿನಿಮಾದಿಂದ ಜೇಮ್ಸ್ಗೆ ತೊಂದರೆಯಾಗಿಲ್ಲ: ನಟ ಶಿವರಾಜ್ ಕುಮಾರ್
'ಪುನೀತ್ ಅವರು ಇರುವಾಗಲೇ ಅವರ ಮುಖೇನ ಪ್ರತಿಭಾನ್ವಿತ ಮಕ್ಕಳಿಗೆ ಬೆಳ್ಳಿ ಡಾಲರ್ಗಳನ್ನು ಕೊಡಬೇಕು ಅಂದುಕೊಂಡಿದ್ದೆವು. ಆದ್ರೆ ಅದು ಸಾಧ್ಯವಾಗಲಿಲ್ಲ. ಈಗ ಅವರ ಭಾವಚಿತ್ರವಿರುವ ಬೆಳ್ಳಿ ಡಾಲರ್ಗಳನ್ನು ನೀಡಿದ್ದೇನೆ' ಎಂದು ದಂಪತಿ ಭಾವುಕರಾದರು.