ಮೈಸೂರು:ನಗರದ ಸಾರ್ವಜನಿಕ ಶೌಚಾಲಯದಲ್ಲಿ ಕುಟುಂಬವೊಂದು ಕಳೆದ 7 ವರ್ಷಗಳಿಂದ ವಾಸವಿತ್ತು. ಈ ಬಗ್ಗೆ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈ ಹಿನ್ನಲೆ ಇಬ್ಬರು ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ ಎಂದು ಕೊಳಗೇರಿ ಮಂಡಳಿಯ ಇಇ ಚೆನ್ನಕೇಶವಯ್ಯ ತಿಳಿಸಿದ್ದಾರೆ.
ರಾಜೇಂದ್ರ ನಗರದ ಕುರಿಮಂಡಿ ಎ ಬ್ಲಾಕ್ ನಲ್ಲಿದ್ದ ಸಾರ್ವಜನಿಕ ಶೌಚಾಲಯದಲ್ಲಿ ಕೃಷ್ಣಮ್ಮ ಕುಟುಂಬಸ್ಥರು ವಾಸವಿದ್ದಾರೆ. ಅಧಿಕಾರಿಗಳು ಈ ಬಗ್ಗೆ ಗಮನ ಹರಿಸದೇ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಲಾಗಿದೆ. ಇದೇ ಕಾರಣಕ್ಕೆ ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧಿಕಾರಿಗಳಾದ ಎಇಇ ತೇಜಸ್ವಿನಿ ಮತ್ತು ಎಇ ನಸ್ರತ್ ಅವರಿಗೆ ನೋಟಿಸ್ ಜಾರಿಯಾಗಿದೆ.