ಕರ್ನಾಟಕ

karnataka

ETV Bharat / state

ರೈತ ಎಂಬ ಕಾರಣಕ್ಕೆ ಹೆಣ್ಣು ಕೊಡಲು ನಿರಾಕರಣೆ.. ಮನನೊಂದು ಅನ್ನದಾತ ಆತ್ಮಹತ್ಯೆ! - farmer committed suicide in mysore news

ಸಾಲದ ಕಾರಣಕ್ಕಲ್ಲ, ರೈತನಿಗೆ ಹೆಣ್ಣು ಕೊಡುವುದಿಲ್ಲ ಎಂದು ಹುಡುಗಿ ಮನೆಯವರು ಹೇಳಿದ್ದರಿಂದ ಮನನೊಂದ ರೈತನೊಬ್ಬ ನೇಣಿಗೆ ಶರಣಾಗಿರುವ ಪ್ರಕರಣ ಮೈಸೂರು ಜಿಲ್ಲೆಯ ಗ್ರಾಮವೊಂದರಲ್ಲಿ ಬೆಳಕಿಗೆ ಬಂದಿದೆ..

farmer committed suicide
ಹೆಣ್ಣು ಕೊಡಲಿಲ್ಲ ಅಂತಾ ರೈತ ಆತ್ಮಹತ್ಯೆ

By

Published : Jan 11, 2021, 7:24 PM IST

ಮೈಸೂರು: ರೈತ ಎಂದು ಹೆಣ್ಣು ಕೊಡದ ಹಿನ್ನೆಲೆ ಮನನೊಂದ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಂಜನಗೂಡು ತಾಲೂಕು ಕುಪ್ಪಸೋಗೆ ಗ್ರಾಮದಲ್ಲಿ ನಡೆದಿದೆ. ಮದುವೆಗೆ ಹೆಣ್ಣು ಸಿಗದ ಹಿನ್ನೆಲೆ ಮಾನಸಿಕ ಖಿನ್ನತೆಗೊಳಗಾಗಿ ನೇಣಿಗೆ ಶರಣಾದ ರೈತನ ಹೆಸರು ಪ್ರವೀಣ್ (34).

ಈತ ಮದುವೆಯಾಗಲು ಕಳೆದ ಆರೇಳು ವರ್ಷದಿಂದ ಹೆಣ್ಣು ಹುಡುಕುತ್ತಿದ್ದ. ಆದರೆ, ಹೆಣ್ಣಿನ ಮನೆಯವರು ರೈತನಿಗೆ ತಮ್ಮ ಮಗಳನ್ನು ಕೊಡುವುದಿಲ್ಲ ಎಂದು ಹೇಳಿ ಕಳಿಸುತ್ತಿದ್ದರು. ಇದರಿಂದ ಮನನೊಂದು ನನ್ನ ತಮ್ಮ ಪ್ರವೀಣ್ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಮೃತನ ಸಹೋದರ ಪರಮೇಶ್ ತಿಳಿಸಿದ್ದಾರೆ.

ಹೆಣ್ಣು ಕೊಡಲಿಲ್ಲ ಅಂತಾ ರೈತ ಆತ್ಮಹತ್ಯೆ

ಹಾಗೆಯೇ ಇನ್ನು ಮುಂದೆಯಾದ್ರೂ ರೈತ ಎಂದು ಕಡೆಗಣನೆ ಮಾಡಬೇಡಿ ಹೆಣ್ಣು ಕೊಡಿ ಎಂದು ಅವರು ಮನವಿ ಮಾಡಿದ್ದಾರೆ.

ಇದನ್ನೂ ಓದಿ:ಚಲಿಸುತ್ತಿದ್ದ ಖಾಸಗಿ ಬಸ್​ನಲ್ಲೇ 24 ವರ್ಷದ ಯುವತಿ ಮೇಲೆ ರೇಪ್​!

ABOUT THE AUTHOR

...view details