ಕರ್ನಾಟಕ

karnataka

ETV Bharat / state

ನಕಲಿ ನಂದಿನಿ ತುಪ್ಪ ಪ್ರಕರಣ : 7 ಆರೋಪಿಗಳನ್ನ ಬಂಧಿಸಿದ ಪೊಲೀಸರು - mysore Fake Nandini ghee case

ಮೈಸೂರು ಹೊರ ಭಾಗದಲ್ಲಿ ಪತ್ತೆಯಾದ ನಕಲಿ ನಂದಿನಿ ತುಪ್ಪ ಘಟಕ ಪ್ರಕರಣ ಸಂಬಂಧ ಈವರೆಗೆ 7 ಜನ ಆರೋಪಿಗಳನ್ನು ಬಂಧಿಸಲಾಗಿದೆ.

Fake Nandini ghee sale case
ನಕಲಿ ನಂದಿನಿ ತುಪ್ಪ ಪ್ರಕರಣ

By

Published : Jan 19, 2022, 3:04 PM IST

Updated : Jan 19, 2022, 11:13 PM IST

ಮೈಸೂರು :ನಕಲಿ ನಂದಿನಿ ತುಪ್ಪ ರಾಜ್ಯದ ಬೇರೆ ಬೇರೆ ಕಡೆ ಸರಬರಾಜಾಗಿರುವ ಶಂಕೆ ಇದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ 7 ಜನ ಆರೋಪಿಗಳನ್ನು ಬಂಧಿಸಲಾಗಿದೆ. ಮತ್ತೊಬ್ಬ ಪ್ರಮುಖ ಆರೋಪಿಯ ಬಂಧನದ ನಂತರ ಮತ್ತಷ್ಟು ಮಾಹಿತಿ ಬಹಿರಂಗವಾಗಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಚೇತನ್ ತಿಳಿಸಿದ್ದಾರೆ.

ಇಂದು ತಮ್ಮ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮೈಸೂರು ಹೊರ ಭಾಗದಲ್ಲಿ ಪತ್ತೆಯಾದ ನಕಲಿ ನಂದಿನಿ ತುಪ್ಪ ಘಟಕ ಪ್ರಕರಣ ಸಂಬಂಧ ಈವರೆಗೆ 7 ಜನ ಆರೋಪಿಗಳನ್ನು ಬಂಧಿಸಲಾಗಿದೆ. ನಕಲಿ ನಂದಿನಿ ತುಪ್ಪ ರಾಜ್ಯದ ಬೇರೆ ಬೇರೆ ಕಡೆ ಸರಬರಾಜಾಗಿರುವ ಶಂಕೆ ಇದೆ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಚೇತನ್

ಹಸು ಕಳ್ಳತನ ಮಾಡುತ್ತಿದ್ದ ಆರೋಪಿಗಳ ಬಂಧನ :ನಂಜನಗೂಡು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ 5 ಹಾಗೂ ಹುಣಸೂರಿನಲ್ಲಿ 5 ಪ್ರಕರಣ ಸೇರಿದಂತೆ ಒಟ್ಟು 10 ಪ್ರಕರಣಗಳಲ್ಲಿ 10 ದನಗಳನ್ನು ಕಳ್ಳತನ ಮಾಡಿದ್ದ 6 ಆರೋಪಿಗಳನ್ನ ಬಂಧಿಸಲಾಗಿದೆ.

ಅವರಿಂದ 7 ಲಕ್ಷ 65 ಸಾವಿರ ಮೌಲ್ಯದ 10 ಹೆಚ್‌ಎಫ್ ಹಸು, 2 ನಾಡ ಹಸು,1 ಕರು, 1 ಬೈಕ್ ಮತ್ತು ಒಂದು ಟಾಟಾ ಏಸ್ ಗೂಡ್ಸ್ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ‌. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ ಎಂದರು.

ಇದನ್ನೂ ಓದಿ:ಅಥಣಿ : ಬೀದಿ ನಾಯಿ ದಾಳಿಗೆ ನಾಲ್ಕು ವರ್ಷದ ಮಗು ಬಲಿ!

Last Updated : Jan 19, 2022, 11:13 PM IST

ABOUT THE AUTHOR

...view details