ಮೈಸೂರು:ರಸ್ತೆಯಲ್ಲಿ ಬಿದ್ದಿದ್ದಆಟಿಕೆ ವಸ್ತುವನ್ನು ಗ್ರೆನೇಡ್ ಎಂದು ಶಂಕಿಸಿ ಜನ ಬೆಚ್ಚಿಬಿದ್ದ ಘಟನೆ ನಗರದ ಹಿನಕಲ್ ರಿಂಗ್ರೋಡ್ನಲ್ಲಿ ನಡೆದಿದೆ.
ಗ್ರೆನೇಡ್ ಆಕಾರದ ಆಟಿಕೆ ವಸ್ತು ನೋಡಿ ಬೆಚ್ಚಿದ ಮೈಸೂರಿಗರು! - ಗ್ರೆನೇಡ್
ಕೀ ಬಂಚ್ ಆಕಾರದ ವಸ್ತು ನೋಡಿ ಗ್ರೆನೇಡ್ ಇರಬಹುದೆಂದು ಹೆದರಿದ್ದ ಜನ. ಪರಿಶೀಲಿಸಿ ಅದು ಗ್ರೆನೇಡ್ ಅಲ್ಲ, ಆಟಿಕೆ ವಸ್ತು ಎಂದು ಮಾಹಿತಿ ನೀಡಿದ ಪೊಲೀಸರು. ನಿಟ್ಟುಸಿರು ಬಿಟ್ಟ ಮೈಸೂರಿಗರು.
ಆಟಿಕೆಯ ಗ್ರೆನೇಡ್
ನಗರದ ಫ್ಲೈ ಓವರ್ನಲ್ಲಿ ಇಬ್ಬರು ಸ್ಕೂಟರ್ನಲ್ಲಿ ಹೋಗುವಾಗ ಕೀ ಬಂಚ್ ಆಕಾರದ ವಸ್ತುವನ್ನು ಬಿಸಾಕಿ ಹೋಗಿದ್ದರು. ಇದರಿಂದ ಭಯಭೀತರಾದ ಜನ ತಕ್ಷಣ ಗ್ರೆನೇಡ್ ಎಸೆದು ಹೋಗಿದ್ದಾರೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಬಳಿಕ ಸ್ಥಳಕ್ಕೆ ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯದಳ ಆಗಮಿಸಿ ಪರಿಶೀಲನೆ ನಡೆಸಿದಾಗ ಅಲ್ಲಿ ಕೀ ಚೈನ್ ಮಾದರಿಯ ವಸ್ತುವೊಂದು ಸಿಕ್ಕಿತ್ತು. ಅದನ್ನು ಪರಿಶೀಲನೆ ಮಾಡಿದಾಗ ಇದೊಂದು ಆಟಿಕೆಯ ವಸ್ತುವಾಗಿದ್ದು, ಗ್ರೆನೇಡ್ ಅಲ್ಲ ಎಂಬುದು ಸ್ಪಷ್ಟವಾಗಿದೆ.