ಮೈಸೂರು:ಸಮ್ಮಿಶ್ರ ಸರ್ಕಾರ ಪತನವಾಗಿದ್ದು ಬಿಜೆಪಿ ಆಪರೇಷನ್‌ನಿಂದ ಅಲ್ಲ, ಅದು ನೈಸರ್ಗಿಕ ಹುಟ್ಟು. ಅವರ ಒಳ ಜಗಳದಿಂದಲೇ ಸರ್ಕಾರ ಬಿದ್ದಿದೆ ಎಂದು ಬಿಜೆಪಿ ಮುಖಂಡ ಎ.ಮಂಜು ವ್ಯಂಗ್ಯಾತ್ಮಕವಾಗಿ ನುಡಿದ್ರು.
ಬಿಜೆಪಿ ಆಪರೇಷನ್ ಅಲ್ಲ, ನಾರ್ಮಲ್ ಡಿಲಿವರಿ: ಎ.ಮಂಜು ವ್ಯಂಗ್ಯ - ಸಮ್ಮಿಶ್ರ ಸರ್ಕಾರ
ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಜೆಡಿಎಸ್ನೊಂದಿಗೆ ಸಮ್ಮಿಶ್ರ ಸರ್ಕಾರ ನಡೆಸಬಾರದಿತ್ತು ಎಂಬುದು ಈಗ ಅರಿವಿಗೆ ಬಂದಿದೆ. ರೈಲು ಹೋದ ಮೇಲೆ ಟಿಕೆಟ್ ತೆಗೆದುಕೊಂಡರೆ ಪ್ರಯೋಜನವಿಲ್ಲ ಎಂದು ಬಿಜೆಪಿ ಮುಖಂಡ ಎ.ಮಂಜು ಕುಟುಕಿದ್ದಾರೆ.
ನಾನು, ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಸೋಲಿಗೆ ಸಿದ್ದರಾಮಯ್ಯ ಕಾರಣ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಟೀಕೆಗೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿ, ಜೆಡಿಎಸ್ ಬಗ್ಗೆ ಈಗ ಅರಿವಾಗಿದೆ ಎನ್ನುತ್ತಿದ್ದಾರೆ. ಸಮ್ಮಿಶ್ರ ಸರ್ಕಾರ ರಚನೆಗೆ ಹೋಗದಂತೆ ನಾನು ಆ ದಿನವೇ ಎಚ್ಚರಿಕೆ ನೀಡಿದ್ದೆ, ನನ್ನ ಮಾತು ಕೇಳಲಿಲ್ಲ ಎಂದು ದೂರಿದರು.
ಫೋನ್ ಕದ್ದಾಲಿಕೆ ಮಾಡಬಹುದು ಎಂದು ಕೋರ್ಟ್ ಹೇಳಿದೆ ಎಂದು ಈಚೆಗೆ ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದಾರೆ. ಯಾವ ದಿನ, ಎಷ್ಟನೇ ಆರ್ಟಿಕಲ್ನಲ್ಲಿ ಹೇಳಿದ್ದಾರೆ ಎಂದು ಅವರೇ ಹೇಳಲಿ. ಭಯೋತ್ಪಾದಕ ಚಟುವಟಿಕೆಗಳು ಕಂಡುಬಂದಲ್ಲಿ ಆಗ ಅನುಮತಿ ತೆಗೆದುಕೊಂಡು ಫೋನ್ ಕದ್ದಾಲಿಕೆ ಮಾಡಬಹುದು ಎಂದರು.