ಕರ್ನಾಟಕ

karnataka

ETV Bharat / state

ಕಾಡಾನೆ ದಾಳಿ ಪ್ರಕರಣ.. ಮೂವರನ್ನು ಬಲಿ ಪಡೆದಿದ್ದ ವಕ್ರದಂತನ ಸೆರೆಯ ರೋಚಕ ಕಾರ್ಯಾಚರಣೆ - kannad top news

ಆಪರೇಶನ್​ ಎಲಿಫೆಂಟ್​ ಖ್ಯಾತಿಯ ಆನೆಗಳಿಂದ ವಕ್ರದಂತನ ಸೆರೆ-ಅರವಳಿಕೆ ಮದ್ದಿನ ಮೂಲಕ ಆನೆಯನ್ನು ನೆಲಕ್ಕರುಳಿಸಿದ ಅರಣ್ಯ ಇಲಾಖೆ- ಇದುವರೆಗೂ 3 ಬಲಿ ಪಡೆದಿದ್ದ ಕಾಡಾನೆ ಕೊನೆಗೂ ಸೆರೆ.

exciting-operation-of-lone-tusk-jungle-captivity
ಕಾಡಾನೆ ದಾಳಿ ಪ್ರಕರಣ: ಒಂಟಿ ದಂತದ ಕಾಡಾನೆ ಸೆರೆಯ ರೋಚಕ ಕಾರ್ಯಾಚರಣೆ

By

Published : Dec 31, 2022, 7:33 PM IST

Updated : Dec 31, 2022, 9:01 PM IST

ಕಾಡಾನೆ ದಾಳಿ ಪ್ರಕರಣ.. ಮೂವರನ್ನು ಬಲಿ ಪಡೆದಿದ್ದ ವಕ್ರದಂತನ ಸೆರೆಯ ರೋಚಕ ಕಾರ್ಯಾಚರಣೆ

ಮೈಸೂರು: ಮಹಿಳೆಯನ್ನು ಕೊಂದು ಹಾಕಿ ಗ್ರಾಮಸ್ಥರಲ್ಲಿ ಭಯ ಭೀತಿ ಹುಟ್ಟಿಸಿದ ಒಂಟಿ ಸಲಗವನ್ನು ಅರಣ್ಯ ಅಧಿಕಾರಿಗಳು ಕೆಲವೇ ಗಂಟೆಗಳಲ್ಲಿ ಸೆರೆ ಹಿಡಿದಿದ್ದು, ಅದರ ರೋಚಕ ಕಾರ್ಯಾಚರಣೆ ವಿವರ ಇಲ್ಲಿದೆ.

ಶುಕ್ರವಾರದಂದು ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ಚಿಕ್ಕ ಬೀಚನಹಳ್ಳಿ ಗ್ರಾಮದ ಚಿಕ್ಕಮ್ಮ ಎಂಬ ರೈತ ಮಹಿಳೆಯನ್ನು ಆನೆ ದಾಳಿ ಮಾಡಿ ಕೊಂದು ಹಾಕಿತ್ತು. ಅಷ್ಟೇ ಅಲ್ಲದೆ ಇಬ್ಬರು ವ್ಯಕ್ತಿಗಳ ಮೇಲೆ ದಾಳಿ ಮಾಡಿ, ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿದ್ದ ವಕ್ರದಂತದ ಒಂಟಿ ಸಲಗವನ್ನು ಅರಣ್ಯ ಇಲಾಖೆ ಸಿಬ್ಬಂದಿ ಅವರು ಆಗಮಿಸಿ ಹೊಲದಲ್ಲಿ ಓಡಾಡುತ್ತಿದ್ದ ಸಲಗವನ್ನ, ಕ್ಷಿಪ್ರ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿದ್ದಾರೆ.

ಆಪರೇಷನ್ ಆಭಿಮನ್ಯು ನೇತೃತ್ವ:ಬಿಳಿಕೆರೆ ಬಳಿಯ ಅರಬಿತಿಟ್ಟು ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟಿದ್ದ ಒಂಟಿ ಸಲಗವನ್ನು ಸೆರೆ ಹಿಡಿಯಲು ಆಪರೇಷನ್ ಎಲಿಫೆಂಟ್ ಖ್ಯಾತಿಯ ಅಭಿಮನ್ಯು, ಭೀಮ, ಮಹೇಂದ್ರ, ಪ್ರಶಾಂತ ಹಾಗೂ ಗಣೇಶ ಸಾಕನೆಗಳನ್ನು ಶಿಬಿರಗಳಿಂದ ಕರೆತಂದು ಎಲಿಫೆಂಟ್​ ಟಾಸ್ಕ್ ​ಫೋರ್ಸ್​ನ ಮುಖ್ಯಸ್ಥೆ ಸೀಮಾ ಅವರ ನೇತೃತ್ವದ ತಂಡದಲ್ಲಿ ಕಾರ್ಯಾಚರಣೆ ಆರಂಭಿಸಿಲಾಯಿತು. ಜೊತೆಗೆ ಇಬ್ಬರು ವೈದ್ಯರು ಸೇರಿದಂತೆ ನೂರಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿಗಳು ಆನೆಯನ್ನು ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಆನೆ ಸೆರೆ ಹಿಡಿಯುವ ದೃಶ್ಯವನ್ನು ಕಣ್ತುಂಬಿಕೊಳ್ಳಲು ಅಕ್ಕ-ಪಕ್ಕ ಗ್ರಾಮದ ಸಾವಿರಾರು ಮಂದಿ ಸ್ಥಳಕ್ಕೆ ಆಗಮಿಸಿದ್ದು, ಕಾಡಾನೆಯನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಅಟ್ಟಾಡಿಸುತ್ತಿದ್ದರು.

ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಸಾಕಾನೆಗಳನ್ನು ಕಂಡ ಒಂಟಿ ದಂತದ ಆನೆ ಅತ್ತಿಂದಿತ್ತ ಜಮೀನಿನ ತುಂಬ ಅಡ್ಡಾಡುತ್ತಾ ಆಟವಾಡಿಸುತಿತ್ತು. ಶನಿವಾರ ಮಧ್ಯಾಹ್ನ 12 ಗಂಟೆಗೆ ಆರಂಭವಾದ ಕಾರ್ಯಾಚರಣೆಯಲ್ಲಿ ಸುಮಾರು 2.30ರ ಹೊತ್ತಿಗೆ ಕಾಡಾನೆಯನ್ನು ಸೆರೆ ಹಿಡಿಯಲಾಯಿತು.

ಅಭಿಮನ್ಯು ಆನೆ ಮೇಲೆ ಕುಳಿತ ಅರಣ್ಯ ಇಲಾಖೆ ಸಿಬ್ಬಂದಿ ಅಕ್ರಂ ಎಂಬುವರು ಕಾಡಾನೆಗೆ ಅರವಳಿಕೆ ಮದ್ದನ್ನು ಡಾಟ್ ಮುಖಾಂತರ ನೀಡಿದರು. ಸುಮಾರು 1 ಗಂಟೆಗಳ ಕಾಲ ಹೊಲದಲ್ಲಿ ಓಡಾಡಿದ ಆನೆ ಕೊನೆಗೂ ಮಂಪರಿನಲ್ಲಿ ನೆಲಕ್ಕೆ ಉರುಳಿತು.

ಆನಂತರ ಅರಣ್ಯ ಇಲಾಖೆಯ ಡಾಕ್ಟರ್​ಗಳು ಒಂಟಿ ಸಲಗಕ್ಕೆ ಚಿಕಿತ್ಸೆ ನೀಡಿ ಸಾಕಾನೆಗಳ ಸಹಾಯದಿಂದ ಒಂಟಿ ದಂತದ ಸಲಗವನ್ನು ಕ್ರೇನ್​ ಮೂಲಕ ಲಾರಿಯಲ್ಲಿ ಹತ್ತಿಸಿ, ದುಬಾರೆ ಆನೆ ಬಿಡಾರಕ್ಕೆ ಕರೆದುಕೊಂಡು ಹೋಗಿ ಕ್ರಾಲ್​ನಲ್ಲಿ ಬಂಧಿಸಲಾಗಿದೆ ಎಂದು ಮೈಸೂರು ವೃತ್ತದ ಮುಖ್ಯ ಅರಣ್ಯಾಧಿಕಾರಿ ಡಾ. ಮಾಲತಿ ಶರ್ಮಾ ಮಾಹಿತಿ ನೀಡಿದರು.

ಕಾರ್ಯಾಚರಣೆಗೆ ಅಡಚಣೆ: ಆನೆ ಸೆರೆ ಹಿಡಿಯುವ ದೃಶ್ಯವನ್ನು ನೋಡಲು ಬಂದಿದ್ದ ಗ್ರಾಮಸ್ಥರಿಂದ ಕೂಗಾಟ, ಚೀರಾಟ ಮತ್ತು ಕಾಡಾನೆಯನ್ನು ಆ ಕಡೆಯಿಂದ ಈ ಕಡೆ ಓಡಿಸುತ್ತಿದ್ದರಿಂದ ಅರಣ್ಯ ಇಲಾಖೆಯವರಿಗೆ ಆನೆ ಸೆರೆ ಹಿಡಿಯುವಲ್ಲಿ ಸ್ವಲ್ಪ ಅಡಚಣೆ ಸಹ ಉಂಟಾಯಿತು.

3 ಜನರನ್ನು ಕೊಂದ ಒಂಟಿ ದಂತದ ಸಲಗ:ಶುಕ್ರವಾರ ಚಿಕ್ಕ ಬೀಚನಹಳ್ಳಿ ಗ್ರಾಮದ ಜಮೀನಿನ ಬಳಿ ಅರಣ್ಯ ಇಲಾಖೆಗೆ ಸೆರೆ ಸಿಕ್ಕ ಈ ಒಂಟಿ ದಂತದ ಸಲಗ 2019ರಲ್ಲಿ ನುಗು ಅರಣ್ಯ ವಲಯ ವ್ಯಾಪ್ತಿಯಲ್ಲಿ ಇಬ್ಬರನ್ನ ಕೊಂದು ಹಾಕಿತ್ತು ಆ ಸಂದರ್ಭದಲ್ಲಿ ಈ ಆನೆಯನ್ನ ಸೆರೆ ಹಿಡಿಯದೆ ಸ್ಥಳೀಯರ ಸಹಾಯದಿಂದ ಕಾಡಿಗೆ ಅಟ್ಟಲಾಗಿತ್ತು.

ಆ ನಂತರ ಪದೇ ಪದೇ ಕಾಡಂಚಿನ ಗ್ರಾಮಗಳ ಜಮೀನಿಗೆ ನುಗ್ಗಿ ಫಸಲನ್ನು ನಾಶ ಮಾಡುತ್ತಿತ್ತು ಈ ಒಂಟಿ ಸಲಗ. ಇತ್ತೀಚಿಗೆ ಮಹಿಳೆಯನ್ನ ಬಲಿ ಪಡೆದಿತ್ತು ಎಂದು ಅರಣ್ಯ ಇಲಾಖೆಯ ಗುರಿಕಾರ ಅಕ್ರಂ ಈಟಿವಿ ಭಾರತ ​ಗೆ ಮಾಹಿತಿ ನೀಡಿದರು.

ಇದನ್ನೂ ಓದಿ:ಮೈಸೂರು: ದಂಪತಿ ಮೇಲೆ ಏಕಾಏಕಿ ಕಾಡಾನೆ ದಾಳಿ.. ಸ್ಥಳದಲ್ಲೇ ಮಹಿಳೆ ಸಾವು!

Last Updated : Dec 31, 2022, 9:01 PM IST

ABOUT THE AUTHOR

...view details