ಮೈಸೂರು :ಲಾಕ್ ಡೌನ್ ವೇಳೆ ಅಕ್ರಮ ಮದ್ಯ ಸಾಗಾಣೆ ಹಿನ್ನೆಲೆ ಜಿಲ್ಲೆಯಲ್ಲಿ ಏಪ್ರಿಲ್ 23 ರಿಂದ ಏಪ್ರಿಲ್ 26 ರ ತನಕ ಅಬಕಾರಿ ಇಲಾಖೆ ಬರೋಬ್ಬರಿ 885 ದಾಳಿ ನಡೆಸಿ 14 ಪ್ರಕರಣಗಳನ್ನು ದಾಖಲಿಸಲಾಗಿದೆ.
ಮೈಸೂರಿನ ವಿವಿಧೆಡೆ ಅಬಕಾರಿ ಅಧಿಕಾರಿಗಳಿಂದ ದಾಳಿ
ಮೈಸೂರಿನಲ್ಲಿ ಏಪ್ರಿಲ್ 23 ರಿಂದ ಏಪ್ರಿಲ್ 26 ರ ತನಕ ಅಬಕಾರಿ ಇಲಾಖೆ ಬರೋಬ್ಬರಿ 885 ದಾಳಿ ನಡೆಸಿ 14 ಪ್ರಕರಣಗಳನ್ನು ದಾಖಲಿಸಲಾಗಿದೆ.
ಮೈಸೂರಿನ ವಿವಿಧ ಕಡೆ ಅಬಕಾರಿ ಅಧಿಕಾರಿಗಳಿಂದ ದಾಳಿ
ಏಪ್ರಿಲ್ 25 ರಂದು ರಾತ್ರಿ ಜಿಲ್ಲಾ ವಿಚಕ್ಷಣ ದಳ ಹಾಗೂ ಮೈಸೂರು ವಲಯ -3 ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನೊಳಗೊಂಡ ತಂಡವು ನಗರದ ವಿಜಯನಗರ ಮತ್ತು ರಿಂಗ್ ರಸ್ತೆ ಪ್ರದೇಶಗಳಲ್ಲಿ ಎರಡು ಪ್ರತ್ಯೇಕ ದಾಳಿ ನಡೆಸಿದೆ. ಅಲ್ಲಿ ಅಕ್ರಮ ಮದ್ಯ ಸಾಗಣೆ ಮತ್ತು ಮಾರಾಟಕ್ಕಾಗಿ ಇಬ್ಬರು ವ್ಯಕ್ತಿಗಳನ್ನು ದಸ್ತಗಿರಿ ಮಾಡಿ, ಅವರಿಂದ 16.800 ಲೀ. ಮದ್ಯ ವಶಪಡಿಸಿಕೊಳ್ಳಲಾಗಿದೆ.
ನಂತರ 02 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಜ್ ಎಂ.ಎಸ್. ಮುರುಳಿ ಅವರು ತಿಳಿಸಿದ್ದಾರೆ.