ಮೈಸೂರು:ಲಾಕ್‌ಡೌನ್ ಸಂದರ್ಭದಲ್ಲಿ ಅಬಕಾರಿ ಇಲಾಖೆ ಯಾವ ರೀತಿ ಕೆಲಸ ಮಾಡುತ್ತಿದೆ ಅನ್ನೋದರ ಕುರಿತಂತೆ ಜಿಲ್ಲಾ ಅಬಕಾರಿ ಡಿಸಿ ಕೆ ಎಸ್ ಮುರಳಿ ಅವರು ಮಾಹಿತಿ ನೀಡಿದ್ದಾರೆ.
ಲಾಕ್‌ಡೌನ್ ಇದ್ರೇನು ಅಬಕಾರಿ ಇಲಾಖೆಗೆ ದಿನದ 24 ಗಂಟೆಯೂ ಕೆಲಸ.. - ಮೈಸೂರು ಲಾಕ್ ಡೌನ್
ಮದ್ಯಕ್ಕೆ ಬೇಡಿಕೆ ಹೆಚ್ಚಾಗಿರುವುದರಿಂದ ದುಪ್ಪಟ್ಟು ಬೆಲೆಗೆ ಮದ್ಯ ಮಾರಾಟ ಮಾಡುತ್ತಾರೆ. ಇದನ್ನು ತಡೆಯಲು 24 ಗಂಟೆಗಳ ಕಾಲ ಇಲಾಖೆ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
excise
ಲಾಕ್‌ಡೌನ್ ಆಗಿ 39 ದಿನ ಕಳೆದಿದೆ. ಮದ್ಯ ಇಲ್ಲದೆ ಇಷ್ಟೊಂದು ಸುದೀರ್ಘವಾದ ಅವಧಿಯಲ್ಲಿ ಮದ್ಯ ವ್ಯಸನಿಗಳು ಮದ್ಯಕ್ಕಾಗಿ ಹುಡುಕಾಡುತ್ತಿರುತ್ತಾರೆ. ಆದ್ದರಿಂದ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದವರ ಮೇಲೆ 14 ಪ್ರಕರಣ ದಾಖಲಿಸಿ 14 ಜನರನ್ನು ಬಂಧಿಸಿದ್ದೇವೆ ಎಂದರು.
100 ಲೀಟರ್ ಮದ್ಯ ವಶಪಡಿಸಿಕೊಂಡಿದ್ದು, ಮದ್ಯಕ್ಕೆ ಬೇಡಿಕೆ ಹೆಚ್ಚಾಗಿರುವುದರಿಂದ ದುಪ್ಪಟ್ಟು ಬೆಲೆಗೆ ಮದ್ಯ ಮಾರಾಟ ಮಾಡುತ್ತಾರೆ. ಇದನ್ನು ತಡೆಯಲು ಇಲಾಖೆ 24 ಗಂಟೆಗಳ ಕಾಲ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.