ಕರ್ನಾಟಕ

karnataka

ETV Bharat / state

ಐಟಿ ದಾಳಿ : ವಿಚಾರಣೆಗೆ ಹಾಜರಾಗುವಂತೆ ಪುಟ್ಟರಾಜು, ರೇವಣ್ಣ ಸಂಬಂಧಿಗಳಿಗೆ ಸೂಚನೆ - undefined

ಮೈಸೂರಿನ ವಿಜಯನಗರದಲ್ಲಿರುವ ನಿವಾಸಿ ಶಿವಕುಮಾರ್, ಭವಾನಿ ರೇವಣ್ಣ ಅಕ್ಕನ ಮಗ ಶರತ್ ಗೌಡ, ಮೈಸೂರು ಲಾರಿ ಮಾಲೀಕರ ಸಂಘದ ಅಧ್ಯಕ್ಷ ರೇವಣ್ಣ ಮನೆ, ಕಚೇರಿ ಮೇಲೆ ಐಟಿ ಅಧಿಕಾರಿಗಳು ದಾಳಿ ಮುಕ್ತಾಯಗೊಂಡಿದೆ.

ಐಟಿ ದಾಳಿ

By

Published : Mar 29, 2019, 8:54 PM IST

ಮೈಸೂರು:ಸಚಿವ ಪುಟ್ಟರಾಜು ಸಂಬಂಧಿ ಹಾಗೂ ಭವಾನಿ ರೇವಣ್ಣ ಅಕ್ಕನ ಮಗನ ಮನೆ ಮೇಲೆ ದಾಳಿ ನಡೆಸಿದ ಐಟಿ ಅಧಿಕಾರಿಗಳು, ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.

ಗುರುವಾರ ಬೆಳಗ್ಗೆ ಸಚಿವ ಪುಟ್ಟರಾಜು ಅವರ ಸಂಬಂಧಿ ಮೈಸೂರಿನ ವಿಜಯನಗರದಲ್ಲಿರುವ ನಿವಾಸಿ ಶಿವಕುಮಾರ್, ಭವಾನಿ ರೇವಣ್ಣ ಅಕ್ಕನ ಮಗ ಶರತ್ ಗೌಡ, ಮೈಸೂರು ಲಾರಿ ಮಾಲೀಕರ ಸಂಘದ ಅಧ್ಯಕ್ಷ ರೇವಣ್ಣ ಮನೆ, ಕಚೇರಿ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದರು. ಎಲ್ಲಾ ಕಡೆಗಳಲ್ಲೂ ತಡರಾತ್ರಿಯೇ ಪರಿಶೀಲನೆ ಮುಗಿಸಿ ಅಧಿಕಾರಿಗಳು ವಾಪಾಸ್​ ತೆರಳಿದ್ದಾರೆ. ಈ ಮೂವರನ್ನೂ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.

ಐಟಿ ಅಧಿಕಾರಿಗಳ ಪರಿಶೀಲನೆ ಮುಕ್ತಾಯ

ತಡರಾತ್ರಿ 1 ಗಂಟೆವರೆಗೂ ದಾಖಲೆಗಳ ಪರಿಶೀಲನೆ ನಡೆಸಿದರು. ಒಟ್ಟು 15 ಐಟಿ ಅಧಿಕಾರಿಗಳಿಂದ ದಾಖಲೆಗಳ ಪರಿಶೀಲನೆ ಮುಕ್ತಾಯವಾಗಿದೆ. ಕೆಲ ಮಹತ್ವದ ದಾಖಲೆಗಳನ್ನು ಐಟಿ ಅಧಿಕಾರಿಗಳು ತೆಗೆದುಕೊಂಡು ಹೋಗಿದ್ದಾರೆ. ಮುಂದಿನ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ತೆರಳಿದ್ದಾರೆ.

For All Latest Updates

TAGGED:

ABOUT THE AUTHOR

...view details