ಮೈಸೂರು:ಮೋದಿ ಮೊದಲು ರೈತರ ಸಮಸ್ಯೆ ಬಗೆಹರಿಸಿ ಬಳಿಕ ಪ್ರತಿಪಕ್ಷಗಳ ಬಗ್ಗೆ ಮಾತನಾಡಲಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕುಟುಕಿದರು.
ಸುತ್ತೂರಿನಲ್ಲಿ ಮಾತನಾಡಿದ ಅವರು, ಸಂಸತ್ನಲ್ಲಿ ಮಾತನಾಡುವ ಮೋದಿ, ರೈತರ ಬಳಿ ಬಂದು ಮಾತನಾಡಲಿ. ರೈತರ ಬಗ್ಗೆ ಮಾತನಾಡುವ ಮೋದಿ, ಯಾಕೆ ರಸ್ತೆಗಳಲ್ಲಿ ಮೊಳೆ ಹೊಡಿಸಬೇಕಿತ್ತು? ಜನರಿಗೆ ಮೀಸಲಾತಿ ಕೊಡ್ತೀವಿ ಎಂದು ಇರುವ ಮೀಸಲಾತಿ ಕಿತ್ತು ಹಾಕಿದ್ದಾರೆ. ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿಧಾನ ಪರಿಷತ್ ಸಭಾಪತಿ ಚುನಾವಣೆಯಲ್ಲಿ ಮೂರು ಪಕ್ಷಗಳಿಗೂ ಬಹುಮತ ಬರುತಿತ್ತು. ಆದರೆ ಜೆಡಿಎಸ್ ಅನುಕೂಲಕರ ರಾಜಕಾರಣ ಮಾಡಿಕೊಂಡು ಬರುತ್ತಿದೆ. ಅವರದ್ದು ಜಾತ್ಯತೀತ ಪಕ್ಷವಲ್ಲ ಎಂದರು.
ಓದಿ : ದೆಹಲಿಯಲ್ಲಿ ನಕಲಿ ರೈತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ: ಸಚಿವ ಈಶ್ವರಪ್ಪ ಆರೋಪ
ಕುರುಬರಿಗೆ ಎಸ್ಟಿ ಮೀಸಲಾತಿ ಕುರಿತು ಮಾತನಾಡಿ, ನಾಯಕರು ಜನರ ಮಧ್ಯದಿಂದ ಹುಟ್ಟಿ ಬರಬೇಕು. ತಾನಾಗಿ ನಾನೊಬ್ಬ ನಾಯಕ ಎಂದು ಹೇಳಿಕೊಳ್ಳುವುದಲ್ಲ. ಕುರುಬರಿಗೆ ಎಸ್ಟಿ ಮೀಸಲಾತಿ ನೀಡುವ ವಿಚಾರದಲ್ಲಿ ನಮ್ಮ ವಿರೋಧವಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಮೀಸಲಾತಿ ವಿರುದ್ಧ ಇವೆ. ಹಿಂದುಳಿದ ಸಮುದಾಯಗಳಿಗೆ ಅನ್ಯಾಯವಾದರೆ ನಾನು ಹೋರಾಟ ಮಾಡುತ್ತೇನೆ ಎಂದು ಹೇಳಿದರು.