ಕರ್ನಾಟಕ

karnataka

ETV Bharat / state

ಜುಬಿಲಂಟ್ ಪ್ರಕರಣವನ್ನು ಸಿಬಿಐಗೆ ವಹಿಸಿ: ಧ್ರುವನಾರಾಯಣ ಆಗ್ರಹ

ಕೇಂದ್ರ ಹಾಗೂ ರಾಜ್ಯ ಸರ್ಕಾರ ಜುಬಿಲಂಟ್ ಕಂಪನಿಯ ಆಮಿಷಕ್ಕೆ ಒಳಗಾಗಿ ತನಿಖೆ ಮುಚ್ಚಿಹಾಕುವ ಪ್ರಯತ್ನ ಮಾಡಿವೆ. ಜಿಲ್ಲೆಯಲ್ಲಿರುವ ಜುಬಿಲಂಟ್ ಕಂಪನಿ ನೌಕರನಿಂದ 74 ಮಂದಿಗೆ ಕೊರೊನಾ ವೈರಸ್ ಹರಡಿತು. ಇದರ ಬಗ್ಗೆ ತನಿಖೆ ಮಾಡಲು ಬಂದ ತನಿಖಾಧಿಕಾರಿ ಹರ್ಷಗುಪ್ತ ಅವರು ತನಿಖೆಗೆ ಸಹಕಾರ ಸಿಗಲಿಲ್ಲವೆಂದು ಹೋಗಿದ್ದಾರೆ ಎಂದು ಧ್ರುವನಾರಾಯಣ ಹೇಳಿದರು.

ex MP dhruvanarayana
ಮಾಜಿ ಸಂಸದ ಧ್ರುವನಾರಾಯಣ

By

Published : May 19, 2020, 5:08 PM IST

ಮೈಸೂರು:ಜಿಲ್ಲೆಯಲ್ಲಿ ಕೊರೊನಾ ವೈರಸ್ ಹರಡಲು ಕಾರಣವಾದ ಜುಬಿಲಂಟ್ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಮಾಜಿ‌ ಸಂಸದ ಆರ್.ಧ್ರುವನಾರಾಯಣ ಒತ್ತಾಯಿಸಿದ್ದಾರೆ.

ಜಲದರ್ಶಿನಿ ಸರ್ಕಾರಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರ ಜುಬಿಲಂಟ್ ಕಂಪನಿಯ ಆಮಿಷಕ್ಕೆ ಒಳಗಾಗಿ ತನಿಖೆಯನ್ನು ಮುಚ್ಚುವ ಪ್ರಯತ್ನ ಮಾಡಿವೆ. ಜಿಲ್ಲೆಯಲ್ಲಿರುವ ಜುಬಿಲಂಟ್ ಕಂಪನಿ ನೌಕರನಿಂದ 74 ಮಂದಿಗೆ ಕೊರೊನಾ ವೈರಸ್ ಹರಡಿತು. ಇದರ ಬಗ್ಗೆ ತನಿಖೆ ಮಾಡಲು ಬಂದ ತನಿಖಾಧಿಕಾರಿ ಹರ್ಷಗುಪ್ತ ಅವರು ತನಿಖೆಗೆ ಸಹಕಾರ ಸಿಗಲಿಲ್ಲವೆಂದು ಹೋಗಿದ್ದಾರೆ.

ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ, ಡಾ. ಸುಧಾಕರ್, ನಂಜನಗೂಡಿನ ಶಾಸಕ ಹರ್ಷವರ್ಧನ್ ಮತ್ತು ಇಂದಿನ ಜಿಲ್ಲಾ ಉಸ್ತುವಾರಿ ಸಚಿವರ ಹೇಳಿಕೆಗಳು ವಿಭಿನ್ನವಾಗಿವೆ.

ಮಾಜಿ ಸಂಸದ ಧ್ರುವನಾರಾಯಣ

ಕಂಪನಿಯ ಆಮಿಷಕ್ಕೆ ಒಳಗಾಗಿ ತನಿಖೆ ಹಂತ ದಿಕ್ಕು ತಪ್ಪಿದೆ. ಜುಬಿಲಂಟ್ ಕಾರ್ಖಾನೆಯ ಮಾಲೀಕರಾದ ಶಾಮ್ ಎಸ್‌. ಭಾಟೀಯ ಹಾಗೂ ಶೋಭ್ನ ಭಾಟಿಯಾ ಅವರ ಒತ್ತಡಕ್ಕೆ ಸರ್ಕಾರಕ್ಕೆ ಮಣಿದಿದೆ. ತಬ್ಲಿಘಿ ಜಮಾತ್​ ಸದಸ್ಯರ ಮೇಲೆ ಕೇಸ್ ಹಾಕಲಾಗಿದೆ. ಆದರೆ ಜುಬಿಲಂಟ್ ಕಂಪನಿ ಮೇಲೆ ಯಾಕೆ ಕೇಸ್ ಹಾಕಲಿಲ್ಲವೆಂದು ಪ್ರಶ್ನಿಸಿದರು.

ABOUT THE AUTHOR

...view details