ಮೈಸೂರು :ಜಿಲ್ಲೆಯಲ್ಲಿ ಲಾಕ್ಡೌನ್ ಸಡಿಲಿಕೆಯಾದ್ರೂ ಜನ ಭಯದಲ್ಲೇ ಕಾಲ ಕಳೆಯುತ್ತಿದ್ದಾರೆ. ವ್ಯಾಪಾರ- ವಹಿವಾಟು ಸಂಪೂರ್ಣ ಹಾಳಾಗಿದೆ. ವಸ್ತುಸ್ಥಿತಿ ನೋಡಿದ್ರೆ ಈ ಪರಿಸ್ಥಿತಿಯಿಂದ ಪಾರಾಗಲು ನಮಗೆ 1 ವರ್ಷವಾದ್ರೂ ಬೇಕು ಅಂತಾರೆ ಸಗಟು ವ್ಯಾಪಾರಿ ಸೈಯದ್.
ಕೊರೊನಾ ಸಂದಿಗ್ಧ ಸ್ಥಿತಿಯಲ್ಲಿ ಪದಾರ್ಥಗಳ ಬೆಲೆ ಕಡಿಮೆ ಇತ್ತು. ಪೂರೈಕೆಯೂ ಕಡಿಮೆ ಇತ್ತು, ವಾಹನಗಳ ಸಂಚಾರವೂ ಇರಲಿಲ್ಲ, ಕೆಲಸಗಾರರಿಗೆ ಕೆಲಸವಿರಲಿಲ್ಲ, ದೊಡ್ಡ ದೊಡ್ಡ ಕಂಪನಿಗಳು ಬಂದ್ ಆಗಿದ್ದವು. ಯಾವುದೇ ಪದಾರ್ಥಗಳು ಬರುತ್ತಿರಲಿಲ್ಲ, ಈಗ ಅನ್ಲಾಕ್ ಆಗಿದ್ದರಿಂದ ಎಲ್ಲಾ ಕಡೆಯಿಂದ ಪದಾರ್ಥಗಳು ಬರುತ್ತಿವೆ. ಆದರೆ, ವ್ಯಾಪಾರ ಮಾತ್ರ ಆಗುತ್ತಿಲ್ಲ.