ಕರ್ನಾಟಕ

karnataka

ETV Bharat / state

ವಿಶ್ವಕಪ್ ಫೈನಲ್​ನಲ್ಲಿ ಭಾರತಕ್ಕೆ ಗೆಲ್ಲುವ ಅವಕಾಶ ಹೆಚ್ಚು: ಅಂಡರ್ 19 ಕ್ರಿಕೆಟ್ ಆಟಗಾರ ಕನಿಷ್ಕ್ ವಿಶ್ವಾಸ - ಭಾರತದ ತಂಡಕ್ಕೆ ಶುಭ ಕೋರಿದ ವಿದ್ಯಾರ್ಥಿಗಳು

ಅಹಮದಾಬಾದ್​ನಲ್ಲಿ ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ನಾಳೆ ಸೆಣಸಲಿವೆ. ಈ ಹಿನ್ನೆಲೆಯಲ್ಲಿ ಅಂಡರ್ 19 ಕ್ರಿಕೆಟ್ ಆಟಗಾರ ಕನಿಷ್ಕ್ ಈಟಿವಿ ಭಾರತಕ್ಕೆ ಸಂದರ್ಶನ ನೀಡಿ, ಮಾಹಿತಿ ನೀಡಿದರು.

Children wish good luck to Indian cricket team
ಭಾರತ ಕ್ರಿಕೆಟ್ ತಂಡಕ್ಕೆ ಶುಭ ಕೋರಿದ ಮಕ್ಕಳು

By ETV Bharat Karnataka Team

Published : Nov 18, 2023, 9:16 PM IST

ಅಂಡರ್ 19 ಕ್ರಿಕೆಟ್ ಆಟಗಾರ ಕನಿಷ್ಕ್ ಅವರು ಈಟಿವಿ ಭಾರತಕ್ಕೆ ಸಂದರ್ಶನ ನೀಡಿದರು.

ಮೈಸೂರು:ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಸೆಣಸಲಿವೆ. ಇಲ್ಲಿಯ ವರೆಗೆ ಭಾರತದ ಕ್ರಿಕೆಟ್ ತಂಡದ ಪ್ರದರ್ಶನ ನೋಡಿದ್ರೆ ಫೈನಲ್​ನಲ್ಲಿ ಇಂಡಿಯಾ ಗೆಲ್ಲಬಹುದು. ಏಕೆಂದರೆ ಎಲ್ಲಾ ವಿಭಾಗದಲ್ಲೂ ಭಾರತ ಬಲಿಷ್ಠವಾಗಿದೆ ಎಂದು ಕ್ರಿಕೆಟ್ ಆಟಗಾರ ಕನಿಷ್ಕ್ ಅವರು ಈಟಿವಿ ಭಾರತ್​ಗೆ ತಿಳಿಸಿದ್ದಾರೆ.

ಈಟಿವಿ ಭಾರತ್​ಗೆ ಸಂದರ್ಶನ ನೀಡಿದ ಅವರು, ಇಡೀ ದೇಶವೇ ನಾಳೆ ನಡೆಯಲಿರುವ ವಿಶ್ವಕಪ್ ಫೈನಲ್ ಪಂದ್ಯ ನೋಡಲೂ ಕಾತರದಿಂದ ಕಾಯುತ್ತಿದೆ. ಭಾರತ ವಿಶ್ವಕಪ್ ಗೆಲ್ಲಲಿ ಎಂದು ಹೋಮ, ಹವನ, ಪೂಜೆಗಳು ನಡೆಯುತ್ತಿವೆ. ಈ ಮಧ್ಯೆ ಕ್ರಿಕೆಟ್ ಯುವ ಆಟಗಾರರು ಸಹ ಭಾರತ ಗೆಲ್ಲಲಿ ಎಂದು ಘೋಷಣೆ ಮೂಲಕ ತಮ್ಮ ಆಸೆ ವ್ಯಕ್ತಪಡಿಸಿದ್ದು. ಈ ಮಧ್ಯೆ ಯುವ ಕ್ರಿಕೆಟ್ ಆಟಗಾರರು ಭಾರತ ನಾಳಿನ ಫೈನಲ್ ಪಂದ್ಯವನ್ನು ಗೆಲ್ಲಲಿ ಎಂದು ಆಶಯ ವ್ಯಕ್ತಪಡಿಸಿದರು.

ಇಲ್ಲಿಯವರೆಗೆ ಭಾರತ ಆಡಿರುವ ಎಲ್ಲಾ ಪಂದ್ಯಗಳಲ್ಲಿ ಸುಗಮವಾಗಿ ಗೆದ್ದು ಬೀಗಿದೆ. ಬ್ಯಾಟಿಂಗ್, ಬೌಲಿಂಗ್, ಫಿಲ್ಡಿಂಗ್ ನಲ್ಲೂ ಭಾರತ ತಂಡ ಬಲಿಷ್ಠ ಆಗಿದೆ. ನಾಳೆ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ಗೆಲ್ಲಬಹುದು, ಅದೇ ರೀತಿ ಆಸ್ಟ್ರೇಲಿಯಾವು ಸಹ ಉತ್ತಮ ತಂಡವಾಗಿದ್ದು, ಟಫ್ ಫೈಟ್ ಕೊಡಬಹುದು. ಅದರೆ ಇಂಡಿಯಾಗೆ ಅಡ್ವಾಂಟೇಜ್ ಎಂದರೆ ಹೋಮ್ ಗ್ರೌಂಡ್, ಜನ ಬೆಂಬಲ ಚೆನ್ನಾಗಿದೆ, ಇದರಿಂದ ಕಾನ್ಫಿಡೆನ್ಸ್ ಹೆಚ್ಚಾಗಿದೆ‌. ಇದು ಸಹ ಭಾರತ ಚೆನ್ನಾಗಿ ಆಡಲು ಸಹಾಯವಾಗುತ್ತದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಇದರ ಜೊತೆಗೆ ಭಾರತದ ಓಪನಿಂಗ್ ಆಟಗಾರ ರೋಹಿತ್ ಶರ್ಮಾ, ಗಿಲ್ ಚೆನ್ನಾಗಿ ಆಡುತ್ತಿದ್ದಾರೆ. ಅವರಿಗೆ ವಿರಾಟ್ ಕೊಹ್ಲಿ, ರಾಹುಲ್, ಶ್ರೇಯಸ್ ಸಾಥ್ ನೀಡುತ್ತಿದ್ದಾರೆ. ಒಟ್ಟಾಗಿ ಭಾರತದ ಟಾಪ್ ಆರ್ಡರ್ ಬ್ಯಾಟ್ಸ್ ಮನ್ ಗಳು ಚೆನ್ನಾಗಿ ಆಡುತ್ತಿದ್ದು, ನಾಳೆ ಗೆಲ್ಲಲಿ ಎಂದ ಕನಿಷ್ಕ್ ಹಾರೈಸಿದರು.

ನನಗೆ ವಿರಾಟ್ ಕೊಹ್ಲಿ ತುಂಬಾ ಇಷ್ಟ, ಅವರ ಫ್ಯಾಷನ್ , ಡೆಡಿಕೇಷನ್, ಆಟದ ಶೈಲಿ ಎಲ್ಲವೂ ಇಷ್ಟ. ಬೌಲಿಂಗ್ ನಲ್ಲಿ ಜಸ್ಪ್ರೀತ್ ಬೂಮ್ರಾ ತುಂಬಾ ಇಷ್ಟ, ಅವರ ಬೌಲಿಂಗ್ ಅನ್ನು ಎದುರಿಸುವುದು ನನ್ನ ಆಸೆ​, ಇದರ ಜೊತೆಗೆ ಆಸ್ಟ್ರೇಲಿಯಾ ಓಪನರ್ ಗಳು ಚೆನ್ನಾಗಿ ಆಡುತ್ತಿದ್ದಾರೆ. ನಾಳಿನ ಪಂದ್ಯ ಸಾಕಷ್ಟು ಕುತೂಹಲದಿಂದ ಕೂಡಿದೆ ಎಂದು ಅಂಡರ್ 19 ಕ್ರಿಕೆಟ್ ಆಟಗಾರ ಕನಿಷ್ಕ್ ಅಭಿಪ್ರಾಯ ತಿಳಿಸಿದ್ದಾರೆ.

ಭಾರತದ ತಂಡಕ್ಕೆ ಶುಭ ಕೋರಿದ ವಿದ್ಯಾರ್ಥಿಗಳು: ಆಸ್ಟ್ರೇಲಿಯ ವಿರುದ್ಧ ಭಾರತ ವಿಶ್ವ ಕಪ್ ಗೆದ್ದು ಬರಲಿ ಎಂದು ಕ್ರಿಕೆಟ್ ಪ್ರೇಮಿಗಳು, ವಿದ್ಯಾರ್ಥಿಗಳ ಸೇರಿ ಮೈಸೂರಿನ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನದಲ್ಲಿ, ಆಟಗಾರರ ಭಾವಚಿತ್ರ, ಧ್ವಜ ಹಿಡಿದು ಶುಭಕೋರಿ ಹಾಗೂ ಗೆದ್ದು ಬಾ ಗೆದ್ದು ಬಾ ಭಾರತ ಗೆದ್ದು ಬಾ, ನಮ್ಮದೇ ನಮ್ಮದೇ ವಿಶ್ವಕಪ್ ನಮ್ಮದೇ, ಹಲವಾರು ಘೋಷಣೆ ಕೂಗುತ್ತ ಶುಭ ಹಾರೈಸಿದರು.

ಬ್ರಾಹ್ಮಣ ಸಂಘದ ಜಿಲ್ಲಾಧ್ಯಕ್ಷ ಡಿ.ಟಿ. ಪ್ರಕಾಶ್ ಮಾತನಾಡಿ, ವಿಶ್ವಕಪ್ ನಲ್ಲಿ ಭಾರತತಂಡವು ಸತತ ಎಲ್ಲ ಪಂದ್ಯಗಳನ್ನು ಗೆದ್ದು ಕ್ರಿಕೆಟ್‌ ಪ್ರೇಮಿಗಳ ಮನ ಗೆದ್ದಿದೆ. ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ನೇತೃತ್ವದಲ್ಲಿ ಪ್ರತಿಯೊಬ್ಬ ಆಟಗಾರರೂ ಸಹ ಅತ್ಯುತ್ತಮ ಸಮನ್ವತೆ ಮತ್ತು ಸಮರ್ಥ ಪ್ರದರ್ಶನದಿಂದಾಗಿ ಈ ಭಾರಿ ವಿಶ್ವಕಪ್ ಗೆಲ್ಲಲಿದೆ ಎಂದು ಟೀಂ ಇಂಡಿಯಾಗೆ ಶುಭಾಶಯ ಕೋರಿದರು.

ಇದನ್ನೂಓದಿ:ತಂಡ ಗೆದ್ದಲ್ಲಿ ಪ್ರತೀ ಆಟಗಾರನಿಗೂ 10 ಲಕ್ಷ ಮೌಲ್ಯದ ನಿವೇಶನ ಉಡುಗೊರೆ: ಬಿಜೆಪಿ ನಾಯಕ

ABOUT THE AUTHOR

...view details