ಮೈಸೂರು: ಕಿರಿಯ ಸಹಾಯಕರು ಮತ್ತು ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ಅರ್ಜಿ ಸ್ವೀಕಾರ ದಿನಾಂಕವನ್ನು ಎರಡನೇ ಬಾರಿ ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌ಸಿ) ಮುಂದೂಡಿದೆ.
ಈಟಿವಿ ಭಾರತ ಫಲಶ್ರುತಿ: ದ್ವಿತೀಯ ದರ್ಜೆ ಸಹಾಯಕರ ಹುದ್ದೆ ಅರ್ಜಿ ಸ್ವೀಕಾರ ಮುಂದೂಡಿಕೆ - ಕರ್ನಾಟಕ ಲೋಕಸೇವಾ ಆಯೋಗ
ಲಾಕ್‌ಡೌನ್ ನಿಯಮದ ನಡುವೆಯೂ ಕೆಪಿಎಸ್‌ಸಿ ಕಿರಿಯ ಹಾಗೂ ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ಅರ್ಜಿ ಸ್ವೀಕಾರದ ದಿನಾಂಕವನ್ನು ಮುಂದೂಡಿರಲಿಲ್ಲ. ಈಟಿವಿ ಭಾರತ ಈ ಕುರಿತು ವಿಸ್ತ್ರತ ಸುದ್ದಿಯನ್ನು ಪ್ರಕಟಿಸಿತ್ತು. ಈ ವರದಿಯ ಹಿನ್ನೆಲೆ ಎಚ್ಚೆತ್ತ ಕೆಪಿಎಸ್‌ಸಿ ದಿನಾಂಕವನ್ನು ಮುಂದೂಡಿ ಜೂನ್ 1ರವರೆಗೆ ಅರ್ಜಿ ಸಲ್ಲಿಸಲು ಹಾಗೂ ಜೂ.2 ಶುಲ್ಕ ಪಾವತಿಸಲು ದಿನಾಂಕ ವಿಸ್ತರಿಸಿ ಆದೇಶ ಹೊರಡಿಸಿದೆ.
ಈಟಿವಿ ಭಾರತ ಫಲಶ್ರುತಿ: ದ್ವಿತೀಯ ದರ್ಜೆ ಸಹಾಯಕರ ಹುದ್ದೆ ಅರ್ಜಿ ಸ್ವೀಕಾರ ಮುಂದೂಡಿಕೆ
ಇದಕ್ಕೂ ಮೊದಲು 'ಈಟಿವಿ ಭಾರತ', ರಾಜ್ಯದಲ್ಲಿ ಎರಡನೇ ಬಾರಿ ಲಾಕ್‌ಡೌನ್ ಮುಂದೂಡಿದ್ದರು ಕರ್ನಾಟಕ ಲೋಕಸೇವಾ ಆಯೋಗ ಕರೆದಿರುವ ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸಲು ಮತ್ತೊಮ್ಮೆ ದಿನಾಂಕವನ್ನು ಮುಂದೂಡದೇ ಇರುವುದು ಅಭ್ಯರ್ಥಿಗಳಲ್ಲಿ ಅಸಮಾಧಾನ ತಂದಿದೆ ಎಂಬ ವರದಿಯನ್ನು ಏಪ್ರಿಲ್ 20ರಂದು ಪ್ರಕಟಿಸಿತು.
ಇದರಿಂದ ಎಚ್ಚೆತ್ತ ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌ಸಿ) ದಿನಾಂಕವನ್ನು ಮುಂದೂಡಿ ಜೂನ್ 1ರವರೆಗೆ ಅರ್ಜಿ ಸಲ್ಲಿಸಲು ಹಾಗೂ ಜೂ.2 ಶುಲ್ಕ ಪಾವತಿಸಲು ವಿಸ್ತರಿಸಿ ಆದೇಶ ಹೊರಡಿಸಿದೆ. ಇದರಿಂದ ಲಕ್ಷಾಂತರ ಅಭ್ಯರ್ಥಿಗಳಿಗೆ ಅನುಕೂಲವಾಗಿದೆ.