ಮೈಸೂರು :ಗುತ್ತಿಗೆದಾರಸಂತೋಷ್ ಪಾಟೀಲ್ ಟೈಪ್ ಆಗಿರುವ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆ ಡೆತ್ ನೋಟ್ ಬಗ್ಗೆ ನನಗೆ ಅನುಮಾನವಿದೆ. ಅದು ಟೈಪ್ ಮಾಡಿರುವ, ಯಾವುದೇ ಸಹಿ ಇಲ್ಲದ ಪತ್ರವಾಗಿದೆ. ಹಾಗಾಗಿ, ಈ ಬಗ್ಗೆ ತನಿಖೆ ನಡೆಸುವಂತೆ ಸಿಎಂ ಅವರಲ್ಲೇ ನಾನು ಮನವಿ ಮಾಡಿದ್ದೇನೆ. ಯಾವುದೇ ತನಿಖೆಗೂ ನಾನು ಸಿದ್ದನಿದ್ದೇನೆ ಎಂದು ಸಚಿವ ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ.
ಸಂತೋಷ್ ಡೆತ್ ನೋಟ್ ಬಗ್ಗೆ ಈಶ್ವರಪ್ಪ ಹೇಳಿದ್ದೇನು : ಸಚಿವರ ವಿಶೇಷ ಸಂದರ್ಶನ - Eshwarappa reaction on santhosh patil suicide case
ಸಂತೋಷ್ ಪಾಟೀಲ್ ಆತ್ಮಹತ್ಯೆಯ ಕುರಿತ ಯಾವುದೇ ತನಿಖೆಗೂ ನಾನು ಸಿದ್ದನಿದ್ದೇನೆ ಎಂದು ಸಚಿವ ಈಶ್ವರಪ್ಪ ತಿಳಿಸಿದ್ದಾರೆ..
ಈಶ್ವರಪ್ಪ
ಘಟನೆ ಬಗ್ಗೆ ಈಟಿವಿ ಭಾರತ್ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ನನ್ನ ಮೇಲೆ ಬಂದ ಆರೋಪದ ಬಗ್ಗೆ ಖಾಸಗಿ ಚಾನೆಲ್ ಹಾಗೂ ಸಂತೋಪ್ ಪಾಟೀಲ್ ಈಗಾಗಲೇ ದೂರು ದಾಖಲಿಸಿದ್ದೇನೆ. ಅಲ್ಲದೇ, ಸಂತೋಷ್ ನನಗೆ ಗೊತ್ತೇ ಇಲ್ಲ. ಆತ ನನ್ನನ್ನ ಗೊತ್ತು ಎಂದು ಹೇಳುತ್ತಿದ್ದಾನೆ ಎಂದ ಸಚಿವರು, ಕಾಂಗ್ರೆಸ್ ಹೇಳಿದ ತಕ್ಷಣ ರಾಜೀನಾಮೆ ಕೊಡಲು ಸಾಧ್ಯವಿಲ್ಲ. ರಾಜೀನಾಮೆ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
ಓದಿ:ಸಂತೋಷ ಪಾಟೀಲ್ ಆತ್ಮಹತ್ಯೆ: ಸಚಿವ ಆರ್.ಅಶೋಕ್, ಹೆಚ್.ವಿಶ್ವನಾಥ್ ಹೇಳಿದ್ದೇನು?
Last Updated : Apr 12, 2022, 7:22 PM IST