ಕರ್ನಾಟಕ

karnataka

ETV Bharat / state

ಮೈಸೂರು ಮೃಗಾಲಯದ ಪ್ರವೇಶ ಶುಲ್ಕ ಹೆಚ್ಚಳ - ಮೃಗಾಲಯದ ಶುಲ್ಕ ಹೆಚ್ಚಳ

ಮೈಸೂರು ಮೃಗಾಲಯವು ಪ್ರವಾಸಿಗರ ನೆಚ್ಚಿನ ತಾಣಗಳಲ್ಲೊಂದು. ರಜೆಯ ದಿನಗಳನ್ನು ಕಳೆಯಲು ಅನೇಕ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಆದರೆ ಇನ್ನು ಮುಂದೆ ಇದು ಕೊಂಚ ದುಬಾರಿ ಎನಿಸಬಹುದು.

ಮೈಸೂರು

By

Published : Jun 25, 2019, 7:25 PM IST

ಮೈಸೂರು:ಚಾಮರಾಜೇಂದ್ರ ಮೃಗಾಲಯದ ಪ್ರವೇಶ ಶುಲ್ಕವನ್ನು ಹೆಚ್ಚಿಸಲಾಗಿದ್ದು, ವಾರದ ದಿನಗಳು ಹಾಗೂ ವಾರಾಂತ್ಯ ಶುಲ್ಕಗಳು ಎಂದು ವರ್ಷದಲ್ಲೇ ಎರಡು ಬಾರಿ ಪ್ರವೇಶ ಶುಲ್ಕವನ್ನು ಹೆಚ್ಚಳ ಮಾಡಲಾಗಿದೆ.

125 ವರ್ಷ ಇತಿಹಾಸ ಇರುವ ಮೈಸೂರಿನ ಚಾಮರಾಜೇಂದ್ರ ಮೃಗಾಲಯದ ಪ್ರವೇಶ ಶುಲ್ಕವನ್ನು ವರ್ಷದಲ್ಲೇ 2 ಬಾರಿ ಹೆಚ್ಚಿಸಲಾಗಿದೆ. ಈಗ ಏರಿಸಿರುವ ಶುಲ್ಕ ಜೂನ್ 1ರಿಂದ ಅನ್ವಯವಾಗುವಂತೆ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಆಡಳಿತ ಮಂಡಳಿಯ ಸಭೆಯಲ್ಲಿ ತಿರ್ಮಾನಿಸಲಾಗಿದೆ.

ಆಹಾರ ಪದಾರ್ಥಗಳ ಹೆಚ್ಚಳ, ಸಿಬ್ಬಂದಿ ವೇತನ, ಅಭಿವೃದ್ಧಿ ಕಾಮಗಾರಿಗಳು, ಹೊಸ ಪ್ರಾಣಿಗಳ ವಿನಿಮಯ ಸೇರಿದಂತೆ ಹಲವಾರು ಕಾರಣಗಳಿಗಾಗಿ ಶುಲ್ಕ ಹೆಚ್ಚಳ ಮಾಡಲಾಗಿದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ತಿಳಿದಿದ್ದಾರೆ.

ವಾರದ ಇತರ ದಿನಗಳಲ್ಲಿ 60 ರೂ. ಇದ್ದಿದ್ದು ಇದೀಗ 80 ರೂ.ಗೆ ಏರಿಸಲಾಗಿದೆ. ವಾರಾಂತ್ಯದ ದಿನಗಳು ಹಾಗೂ ಸರ್ಕಾರಿ ರಚನೆಗಳಲ್ಲಿ 80 ರಿಂದ 100 ರೂಪಾಯಿಗೆ ಶುಲ್ಕ ಹೆಚ್ಚಿಸಲಾಗಿದೆ. ಅದೇ ರೀತಿ ಮಕ್ಕಳಿಗೆ ವಾರದ ಇತರ ದಿನಗಳಲ್ಲಿ 30 ರಿಂದ 40 ರೂಪಾಯಿ, ವಾರಾಂತ್ಯದಲ್ಲಿ 40-50 ರೂಪಾಯಿ ಹೆಚ್ಚಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ABOUT THE AUTHOR

...view details