ಕರ್ನಾಟಕ

karnataka

ETV Bharat / state

ಕಾನ್​ಸ್ಟೇಬಲ್​ಗೆ ಪೊಲೀಸ್ ಠಾಣೆಯಲ್ಲಿ ಸೀಮಂತ.. ಸಿಬ್ಬಂದಿ ಸಂಭ್ರಮ - Employees arranged baby shower for constable

ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ಮಹಿಳಾ ಸಿಬ್ಬಂದಿ ರೇಖಾ ಅವರಿಗೆ ಸೀಮಂತ ಮಾಡುವ ಮೂಲಕ ಮಹಿಳಾ ಮತ್ತು ಪುರುಷ ಪೊಲೀಸ್ ಸಿಬ್ಬಂದಿ ಸಂಭ್ರಮಪಟ್ಟರು.

Employees arranged baby shower for constable
ಕಾನ್​ಸ್ಟೇಬಲ್​ಗೆ ಪೊಲೀಸ್ ಠಾಣೆಯಲ್ಲಿ ಸೀಮಂತ

By

Published : Mar 7, 2021, 2:11 PM IST

ಮೈಸೂರು:ಠಾಣೆಯಲ್ಲಿಯೇ ಮಹಿಳಾ ಕಾನ್​ಸ್ಟೇಬಲ್​ಗೆ ಸೀಮಂತ ಮಾಡುವ ಮೂಲಕ ಪೊಲೀಸ್ ಠಾಣೆಗಳು ಜನಸ್ನೇಹಿ ಆಗಿರುವುದರ ಜೊತೆಗೆ ಸಿಬ್ಬಂದಿ ಆತ್ಮೀಯತೆಯಿಂದ ಇದ್ದಾರೆ ಎಂದು ಪೊಲೀಸರು ತೋರಿಸಿದ್ದಾರೆ.

ಕಾನ್​ಸ್ಟೇಬಲ್​ಗೆ ಪೊಲೀಸ್ ಠಾಣೆಯಲ್ಲಿ ಸೀಮಂತ..

ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ಮಹಿಳಾ ಸಿಬ್ಬಂದಿ ರೇಖಾ ಅವರಿಗೆ ಸೀಮಂತ ಮಾಡುವ ಮೂಲಕ ಮಹಿಳಾ ಮತ್ತು ಪುರುಷ ಪೊಲೀಸ್ ಸಿಬ್ಬಂದಿ ಸಂಭ್ರಮಪಟ್ಟರು. ಪೊಲೀಸ್ ಕಾನ್​ಸ್ಟೇಬಲ್​ ರೇಖಾ ಅವರಿಗೆ ಕೈ ಬಳೆ ತೊಡಿಸಿ, ಹೂ ಮುಡಿಸುವ ಮೂಲಕ ಸೀಮಂತ ಶಾಸ್ತ್ರ ಮಾಡಲಾಯಿತು. ಸಬ್ ಇನ್ಸ್​ಪೆಕ್ಟರ್ ದಿವಾಕರ್, ಪಿಎಸ್‌ಐಗಳಾದ ರಾಜು, ಲೀಲಾವತಿ ನೇತೃತ್ವದಲ್ಲಿ ಸೀಮಂತ ಕಾರ್ಯ ನಡೆಯಿತು.

ಕಾನ್​ಸ್ಟೇಬಲ್​ಗೆ ಪೊಲೀಸ್ ಠಾಣೆಯಲ್ಲಿ ಸೀಮಂತ..

ಠಾಣೆಯ ಎಲ್ಲಾ ಸಿಬ್ಬಂದಿ ಶುಭ ಹಾರೈಸಿದ ಪರಿಗೆ ರೇಖಾ ಭಾವುಕರಾದರು. ಬಳಿಕ ಮಾತನಾಡಿ, ಮನೆಯಲ್ಲಿ ಸಿಗದ ಈ ರೀತಿಯ ಆತ್ಮೀಯತೆ, ಠಾಣೆಯಲ್ಲಿ ಸಿಕ್ಕಿದೆ. ಪೊಲೀಸ್ ಠಾಣೆಗಳು ಜನಸ್ನೇಹಿ ಮಾತ್ರವಲ್ಲ. ಸಿಬ್ಬಂದಿ ನಡುವಿನ ಸ್ನೇಹ ಬಾಂಧವ್ಯಕ್ಕೂ ಸಾಕ್ಷಿಯಾಗಿದೆ ಎಂದರು.

ಕಾನ್​ಸ್ಟೇಬಲ್​ಗೆ ಪೊಲೀಸ್ ಠಾಣೆಯಲ್ಲಿ ಸೀಮಂತ..

ಶಿವಮೊಗ್ಗ ಜಿಲ್ಲೆಯ ಸಾಗರ ನಿವಾಸಿಯಾಗಿರುವ ರೇಖಾ, ಕಳೆದ 4 ವರ್ಷಗಳಿಂದ ದೇವರಾಜ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರೇಖಾ ಪತಿ ರಾಜೇಶ್ ಬೆಂಗಳೂರಿನ ಬಿಎಂಟಿಸಿಯಲ್ಲಿ ನಿರ್ವಾಹಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಓದಿ:'ಆಧುನಿಕ ಯುಗದ ಗ್ರಾಫಿಕ್ಸ್​‌ಗೆ ಬಲಿಪಶು ಆಗುವ ಭಯ ಕಾಡುತ್ತಿದೆ'

ABOUT THE AUTHOR

...view details