ಕರ್ನಾಟಕ

karnataka

ETV Bharat / state

ಕೊರೊನಾ ಭೀತಿ: ಅರಮನೆ ಆವರಣದಲ್ಲಿ ತುರ್ತು ಚಿಕಿತ್ಸಾ ಸೇವಾ ಘಟಕ ಆರಂಭ

ಕೊರೊನಾ ಭೀತಿ ಎಲ್ಲೆಡೆ ಆವರಿಸುತ್ತಿದ್ದು, ಅರಮನೆ ಆವರಣದಲ್ಲಿ ತುರ್ತು ಚಿಕಿತ್ಸಾ ಸೇವೆ ಆರಂಭಿಸಲಾಗಿದೆ ಎಂದು ಅರಮನೆ ಆಡಳಿತ ಮಂಡಳಿಯ ಉಪ ನಿರ್ದೇಶಕರು ತಿಳಿಸಿದ್ದಾರೆ.

state Coronavirus news, karnataka state Coronavirus news, Mysore Coronavirus news, Emergency services begin in Mysore Palace premises, ರಾಜ್ಯಕ್ಕೆ ಕೊರೊನಾ ವೈರಸ್​, ಕರ್ನಾಟಕ ರಾಜ್ಯಕ್ಕೆ ಕೊರೊನಾ ವೈರಸ್​, ಮೈಸೂರು ಕೊರೊನಾ ವೈರಸ್​ ಸುದ್ದಿ, ಮೈಸೂರು ಅರಮನೆ ಆವರಣದಲ್ಲಿ ತುರ್ತು ಚಿಕಿತ್ಸಾ ಸೇವಾ ಆರಂಭ,
ಅರಮನೆ ಆವರಣದಲ್ಲಿ ತುರ್ತು ಚಿಕಿತ್ಸಾ ಸೇವಾ ಕಾರ್ಯಾರಂಭ

By

Published : Mar 4, 2020, 2:07 AM IST

ಮೈಸೂರು: ಕೊರೊನಾ ವೈರಸ್ ಭೀತಿ ಹಿನ್ನೆಲೆ ಅರಮನೆ ಆವರಣದಲ್ಲಿ ತುರ್ತು ಚಿಕಿತ್ಸಾ ಘಟಕ ತೆರೆದು ಚಿಕಿತ್ಸಾ ಸೇವೆ ಆರಂಭಿಸಲಾಗಿದೆ ಎಂದು ಅರಮನೆ ಆಡಳಿತ ಮಂಡಳಿಯ ಉಪ ನಿರ್ದೇಶಕ ಸುಬ್ರಹ್ಮಣ್ಯ ಹೇಳಿದರು.

ಅರಮನೆ ಆವರಣದಲ್ಲಿ ತುರ್ತು ಚಿಕಿತ್ಸಾ ಸೇವಾ ಘಟಕ ಕಾರ್ಯಾರಂಭ

ಅತಿ ಹೆಚ್ಚು ವಿದೇಶಿ ಪ್ರವಾಸಿಗರು ಭೇಟಿ ನೀಡುವ ಮೈಸೂರು ಅರಮನೆ ಆವರಣದಲ್ಲಿ ಕೊರೊನಾ ವೈರಸ್ ಕುರಿತಾಗಿ ಎಚ್ಚರಿಕೆ ವಹಿಸಲಾಗಿದೆ. ಕೊರೊನಾ ಭೀತಿ ಹಿನ್ನೆಲೆ ಅರಮನೆಗೆ ಭೇಟಿ ನೀಡುವ ವಿದೇಶಿಗರು ಸೇರಿದಂತೆ ಇತರ ವ್ಯಕ್ತಿಗಳ ಸುರಕ್ಷತೆ ದೃಷ್ಟಿಯಿಂದ ಈ ವೈರಸ್ ಬಗ್ಗೆ ತಿಳುವಳಿಕೆ ನೀಡುವ ಡಿಸ್​ಪ್ಲೇ ಬೋರ್ಡ್ ಹಾಕಲಾಗಿದೆ ಎಂದರು.

ಆವರಣದ ಒಳಗಡೆ ಸ್ವಚ್ಛತೆ ಕಾಪಾಡಿಕೊಳ್ಳಲು ಆದ್ಯತೆ ನೀಡಲಾಗಿದೆ. ಅರಮನೆ ಆವರಣದಲ್ಲಿ ತುರ್ತು ಚಿಕಿತ್ಸಾ ಘಟಕ ತೆರೆದಿದ್ದು, ಪ್ರವಾಸಿಗರಿಗೆ ಮಾಸ್ಕ್​​ಗಳನ್ನು ವಿತರಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಸುಬ್ರಹ್ಮಣ್ಯ ಹೇಳಿದರು.

ABOUT THE AUTHOR

...view details