ಕರ್ನಾಟಕ

karnataka

ETV Bharat / state

ಹೆಚ್​ಡಿ ಕೋಟೆಯಲ್ಲಿ ಜಮೀನಿಗೆ ಲಗ್ಗೆ ಇಟ್ಟ ಆನೆಗಳ ಹಿಂಡು.. ಸ್ಥಳೀಯರಲ್ಲಿ ಆತಂಕ - ಆನೆ ಹಾವಳಿ

10ಕ್ಕೂ ಹೆಚ್ಚು ಆನೆಗಳು ನುಗು ಹಿನ್ನೀರಿನಲ್ಲಿ ಓಡಾಡುತ್ತಿರುವುದು ಕಂಡುಬಂದಿದೆ. ಈ ಗಜ ಪಡೆಯನ್ನು ಕಾಡಿಗಟ್ಟಲು ಅರಣ್ಯ ಇಲಾಖೆ ಸಿಬ್ಬಂದಿ ಮುಂದಾಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

elephants-rushed-to-agricultural-land-in-mysore
ಜಮೀನಿಗೆ ಲಗ್ಗೆ ಇಟ್ಟ ಆನೆಗಳ ಹಿಂಡು

By

Published : Aug 4, 2021, 5:09 PM IST

Updated : Aug 4, 2021, 6:37 PM IST

ಮೈಸೂರು:ಹೆಚ್.ಡಿ. ಕೋಟೆ ತಾಲೂಕಿನ ನುಗು ಹಿನ್ನೀರಿನ ಪ್ರದೇಶದಲ್ಲಿ ಆನೆಗಳ ಹಿಂಡು ಕಾಣಿಸಿಕೊಂಡಿದ್ದು, ರೈತರಲ್ಲಿ ಆತಂಕ ಮನೆ ಮಾಡಿದೆ. ಜಮೀನಿನಲ್ಲಿ ಆನೆಗಳ ಹಿಂಡನ್ನು ಕಂಡು ಗಾಬರಿಗೊಂಡ ಗ್ರಾಮಸ್ಥರು ಕಾಡಿಗಟ್ಟಲು ಹರಸಾಹಸ ಪಡುತ್ತಿದ್ದಾರೆ.

ಹೆಚ್​ಡಿ ಕೋಟೆಯಲ್ಲಿ ಜಮೀನಿಗೆ ಲಗ್ಗೆ ಇಟ್ಟ ಆನೆಗಳ ಹಿಂಡು

ಜಮೀನಿಗೆ ಲಗ್ಗೆ ಇಟ್ಟಿರುವ ಆನೆಗಳ ಹಿಂಡಿನಿಂದ ಬೆಳೆ ಹಾನಿ ಮಾಡುವ ಭೀತಿ ಎದುರಾಗಿದ್ದು, 10ಕ್ಕೂ ಹೆಚ್ಚು ಆನೆಗಳು ನುಗು ಹಿನ್ನೀರಿನಲ್ಲಿ ಓಡಾಡುತ್ತಿರುವುದು ಕಂಡುಬಂದಿದೆ. ಈ ಆನೆಗಳನ್ನು ಕಾಡಿಗಟ್ಟಲು ಅರಣ್ಯ ಇಲಾಖೆ ಸಿಬ್ಬಂದಿ ಮುಂದಾಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಓದಿ:ರಾಜ್ಯದಲ್ಲೇ ಮೊದಲ ಪ್ರಯೋಗ.. ಮೈಸೂರು ಮೃಗಾಲಯದಲ್ಲಿ ಗಜ ಪಡೆಗೆ ನಿರ್ಮಾಣವಾಯ್ತು ಈಜುಕೊಳ

Last Updated : Aug 4, 2021, 6:37 PM IST

ABOUT THE AUTHOR

...view details